ADVERTISEMENT

ಭಾರಿ ಗಾಳಿ ಮಳೆಗೆ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಹಾನಿ

​ಪ್ರಜಾವಾಣಿ ವಾರ್ತೆ
Published 4 ಮೇ 2025, 6:20 IST
Last Updated 4 ಮೇ 2025, 6:20 IST
ಸೋಮವಾರಪೇಟೆಯಲ್ಲಿ ಶುಕ್ರವಾರ  ಸುರಿದ ಭಾರಿ ಮಳೆಗೆ ಆನೆಕರೆಯ ಆವರಣ ಗೋಡೆ ಕುಸಿದಿರುವುದು
ಸೋಮವಾರಪೇಟೆಯಲ್ಲಿ ಶುಕ್ರವಾರ  ಸುರಿದ ಭಾರಿ ಮಳೆಗೆ ಆನೆಕರೆಯ ಆವರಣ ಗೋಡೆ ಕುಸಿದಿರುವುದು   

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಶುಕ್ರವಾರ ಮಧ್ಯಾಹ್ನ ಗುಡುಗು ಸಿಡಿಲಿನೊಂದಿಗೆ ಆಲಿಕಲ್ಲಿನೊಂದಿಗೆ ಸುರಿದ ಭಾರಿ ಗಾಳಿ ಮಳೆಗೆ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಹಾನಿಯಾದ ಘಟನೆ ನಡೆದಿದೆ.
ಗಾಳಿ ಮಳೆಯಿಚಂದಾಗಿ ನೂರಾರು ವರ್ಷ ಇತಿಹಾಸ ಇರುವ ಆನೆಕರೆಯ ಆವರಣ ಗೋಡೆ ಕುಸಿದು ನಷ್ಟವಾಗಿದೆ. ಇದು ರಾಜ್ಯ ಹೆದ್ದಾರಿಯಲ್ಲಿರುವುದರಿಂದ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಅನಾಹುತ ಸಂಭವಿಸುವ ಮುನ್ನ ಆವರಣ ಗೋಡೆ ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಶಾಂತಳ್ಳಿ ಹೋಬಳಿಯಾದ್ಯಂತ ಭಾರಿ ಗಾಳಿ ಮಳೆಗೆ ವಿದ್ಯುತ್ ಮಾರ್ಗದ ಮೇಲೆ ಮರಗಳು ಉರುಳಿದ ಪರಿಣಾಮ ವಿದ್ಯುತ್ ಕಂಬಗಳು ನೆಲ್ಲಕ್ಕುರುಳಿವೆ. ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮನೆ ಕೊಪ್ಪ, ಇನಕನಳ್ಳಿ, ಶಾಂತಳ್ಳಿ ಹರಗಕ್ಕೆ ಸಂಪರ್ಡಸುವ 11ಕೆವಿ ವಿದ್ಯುತ್ ಮಾರ್ಗ ಮತ್ತು ಕೂತಿ ಸಂಪರ್ಕಿಸುವ 11ಕೆವಿ ವಿದ್ಯುತ್ ಮಾರ್ಗದಲ್ಲಿ ಹಲವಾರು ವಿದ್ಯುತ್ ಕಂಬಗಳು ಮುರಿದು ನಷ್ಟವಾಗಿದೆ.ಇದರೊಂದಿಗೆ ಸಾಕಸ್ಟು ಗ್ರಾಮಗಳಲ್ಲಿ ನಷ್ಟವಾಗಿರುವುದಾಗಿ ತಿಳಿದುಬಂದಿದ್ದು, ಸೆಸ್ಕ್ ಇಲಾಖೆಯವರು ಶನಿವಾರ ತುರ್ತು ಕಾಮಗಾರಿ ಮಾಡುವುದರೊಂದಿಗೆ ವಿದ್ಯುತ್ ಮಾರ್ಗ ಸರಿಪಡಿಸಿದರು.

 ತೋಳೂರುಶೆಟ್ಟಳ್ಳಿ ದೊಡ್ಡಬ್ಬೂರು ಗ್ರಾಮದ ವಿದ್ಯುತ್ ಮಾರ್ಗದ ಮೇಲೆ ಬಿದ್ದಿದ್ದ ಮರ ತೆರವುಗೊಳಿಸಿರುವುದು
ಸೋಮವಾರಪೇಟೆ ತಾಲ್ಲೂಕಿನ ತೋಳೂರುಶೆಟ್ಟಳ್ಳಿ ಚಿಕ್ಕತೋಳೂರುಶೆಟ್ಟಳ್ಳಿ ಗ್ರಾಮದ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದಿದ್ದು ತೆರವುಗೊಳಿಸಿರುವುದು.
  ತೋಳೂರುಶೆಟ್ಟಳ್ಳಿ ಗ್ರಾಮದ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.