
ಪ್ರಜಾವಾಣಿ ವಾರ್ತೆ
ಸೋಮವಾರಪೇಟೆ: ಪಟ್ಟಣ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ.
ತಾಲ್ಲೂಕಿನ ಕಿರಗಂದೂರು, ತಾಕೇರಿ, ಐಗೂರು, ಹಿರಿಕರ, ಗೌಡಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ತಡವಾಗಿಯಾದರೂ, ಉತ್ತಮ ಮಳೆಯಾಗುವ ಮೂಲಕ ಕಾಫಿ ಹೂ ಅರಳಲು ಸಹಕಾರಿಯಾಯಿತು. ಆದರೆ, ಉಳಿದ ಕಡೆಗಳಲ್ಲಿ ಮಳೆಯಾಗದಿದ್ದರಿಂದ ಕಾಫಿ ಫಸಲಿಗೆ ಹಾನಿಯಾಗಿದೆ. ಸರಿಯಾಗಿ ಮಳೆಯಾಗದಿದ್ದರಿಂದ ಹಾಕಿರುವ ಶುಂಠಿ ಬೆಳೆ ಒಣಗಿ ಹೋಗಿದೆ. ಹಿಂದಿನ ಸಾಲಿನಲ್ಲಿ ಮಳೆಯಾಗದೆ, ತೀವ್ರ ಬರವಾಗಿದ್ದರಿಂದ ಹೆಚ್ಚಿನ ಕೊಳವೆಬಾವಿ, ಕೆರೆ, ಹೊಳೆ, ತೋಡುಗಳಲ್ಲಿ ನೀರು ಬತ್ತಿಹೋಗಿದ್ದರಿಂದ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.