ADVERTISEMENT

ಹಸೆಮಣೆ ಏರಿದ ಹಾಕಿಪಟು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 14:47 IST
Last Updated 14 ಡಿಸೆಂಬರ್ 2020, 14:47 IST
ವಿರಾಜಪೇಟೆ ಸಮೀಪದ ಅಮ್ಮತ್ತಿಯಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಕಿಪಟು ತಿಮ್ಮಣ್ಣ ಹಾಗೂ ಸಂಸ್ಕೃತಿ ಅವರ ವಿವಾಹ ನಡೆಯಿತು
ವಿರಾಜಪೇಟೆ ಸಮೀಪದ ಅಮ್ಮತ್ತಿಯಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಕಿಪಟು ತಿಮ್ಮಣ್ಣ ಹಾಗೂ ಸಂಸ್ಕೃತಿ ಅವರ ವಿವಾಹ ನಡೆಯಿತು   

ವಿರಾಜಪೇಟೆ: ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಭಾರತ ತಂಡವನ್ನು ಪ್ರತಿನಿಧಿಸಿದ್ದ ಹಾಕಿಪಟು ತಿಮ್ಮಣ್ಣ ಹಾಗೂ ಸಂಸ್ಕೃತಿ ಅವರ ವಿವಾಹ ಸಮೀಪದ ಅನ್ನತ್ತಿಯ ಕೊಡವ ಸಮಾಜದಲ್ಲಿ ಭಾನುವಾರ ನಡೆಯಿತು.

ತಿಮ್ಮಣ್ಣ ಸಮೀಪದ ಮಗ್ಗುಲ ಗ್ರಾಮದ ಪುಲಿಯಂಡ ಲೋಕೇಶ್ ಹಾಗೂ ಲೀಲಾವತಿ ದಂಪತಿ ಪುತ್ರ. ಸಂಸ್ಕೃತಿ ಅವರು ಸಮೀಪದ ಕದನೂರು ಗ್ರಾಮದ ಕುಂಬೇರ ಮನುಕುಮಾರ್ ಹಾಗೂ ಪುಷ್ಪ ದಂಪತಿ ಪುತ್ರಿ.

ವಿವಾಹ ಸಮಾರಂಭದಲ್ಲಿ ಅಂತರರಾಷ್ಟ್ರೀಯ ಹಾಕಿ ಆಟಗಾರರಾದ ವಿ.ಆರ್. ರಘುನಾಥ್, ಮೇಕೇರಿರ ನಿತಿನ್, ಚೇಂದಂಡ ನಿಖಿನ್, ಬಾಳೆಯಡ ಪೂಣಚ್ಚ, ಸೋಮೆಯಂಡ ಅಪ್ಪಚ್ಚು, ಕರಿನೆರವಂಡ ಸೋಮಣ್ಣ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.