ADVERTISEMENT

ಮಡಿಕೇರಿ | ಗ್ರಾಮ ಪಂಚಾಯಿತಿಗೆ ವಿದ್ಯಾರ್ಥಿಗಳ ಭೇಟಿ; ಹಲವು ಸಮಸ್ಯೆಗಳ ಪ್ರಸ್ತಾವ

‘ಕಾಲ್ಸ್’ ಶಾಲೆಯ 11 ಮತ್ತು 12 ತರಗತಿಯ ವಿದ್ಯಾರ್ಥಿಗಳಿಂದ ವಿಭಿನ್ನ ಕಾರ್ಯಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 4:21 IST
Last Updated 5 ಸೆಪ್ಟೆಂಬರ್ 2024, 4:21 IST
ಗೋಣಿಕೊಪ್ಪಲು ಸಮೀಪದ ‘ಕಾಲ್ಸ್’ ಶಾಲೆಯ 11 ಮತ್ತು 12 ತರಗತಿಯ ವಿದ್ಯಾರ್ಥಿಗಳು ಬುಧವಾರ ತಮ್ಮ ವ್ಯಾಪ್ತಿಯ ಹಾತೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.
ಗೋಣಿಕೊಪ್ಪಲು ಸಮೀಪದ ‘ಕಾಲ್ಸ್’ ಶಾಲೆಯ 11 ಮತ್ತು 12 ತರಗತಿಯ ವಿದ್ಯಾರ್ಥಿಗಳು ಬುಧವಾರ ತಮ್ಮ ವ್ಯಾಪ್ತಿಯ ಹಾತೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.   

ಮಡಿಕೇರಿ: ಗೋಣಿಕೊಪ್ಪಲು ಸಮೀಪದ ‘ಕಾಲ್ಸ್’ ಶಾಲೆಯ 11 ಮತ್ತು 12 ತರಗತಿಯ ವಿದ್ಯಾರ್ಥಿಗಳು ಬುಧವಾರ ತಮ್ಮ ವ್ಯಾಪ್ತಿಯ ಹಾತೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ಮುಖ್ಯವಾಗಿ ಶಾಲೆಯ ಮುಂದೆ ಸಂಚಾರ ದಟ್ಟಣೆಯ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ವಿಷಯವನ್ನು ಅಧಿಕಾರಿಗಳು  ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರು.

ಶಾಲೆಯ ಗೇಟಿನ ಮುಂಭಾಗ ರಸ್ತೆಯಲ್ಲಿ ಝೀಬ್ರಾ ಕ್ರಾಸಿಂಗ್ ಇಲ್ಲ, ವೇಗ ಮಿತಿಯನ್ನು ನಿಗದಿಪಡಿಸಿರುವ ಸೂಚನಾ ಫಲಕಗಳಿಲ್ಲ ಎಂದು ಗಮನ ಸೆಳೆದರು.

ADVERTISEMENT

ಶಾಲೆಯ ಮುಂಭಾಗ ಕಸದ ಡಬ್ಬಿ ಹಾಗೂ ಬೀದಿ ದೀಪಗಳೂ ಇಲ್ಲ. ಇವುಗಳನ್ನೆಲ್ಲ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಇವರ ಅಹವಾಲುಗಳನ್ನು ಆಲಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈಡೇರಿಸುವ ಭರವಸೆ ನೀಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಜ್ಮಾ ಜಬೀನಾ, ಅಧ್ಯಕ್ಷೆ ಎಸ್.ಯು.ಅಕ್ಕಮ್ಮ ಹಾಗೂ ಉಪಾಧ್ಯಕ್ಷರಾದ ಕೆ.ಎಸ್.ಚಿಣ್ಣಪ್ಪ ಅವರ ಸಹಕಾರದಿಂದ ಈ ಕಾರ್ಯಕ್ರಮ ನಡೆಯಿತು. ಸ್ವಚ್ಛ ಭಾರತ ಮಿಷನ್‌ ಅಂಗವಾಗಿ ಸ್ವಚ್ಛತಾ ಪಖ್ವಾಡ ಕಾರ್ಯಕ್ರಮದ ಅಂಗವಾಗಿ ಈ ಕಾರ್ಯಚಟುವಟಿಕೆ ನಡೆಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.