
ಸುಂಟಿಕೊಪ್ಪ: ಇಲ್ಲಿನ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಸಂಘದ ಕಚೇರಿಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಮಡಿಕೇರಿ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರ ಮುಖ್ಯಸ್ಥ ಡಾ. ಕರುಂಬಯ್ಯ ಮಾತನಾಡಿ, ‘ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ರಕ್ತದ ಸಂಗ್ರಹ ಕಡಿಮೆ ಇದ್ದು, ಈ ನಿಟ್ಟಿನಲ್ಲಿ ಇಂತಹ ಶಿಬಿರಗಳು ಅತ್ಯಗತ್ಯ. ಮೂರು ತಿಂಗಳಿಗೊಮ್ಮೆ ದಾನಿಗಳು ರಕ್ತವನ್ನು ನೀಡುವ ಮೂಲಕ ಆರೋಗ್ಯವಂತರಾಗಿ ಬದುಕಲು ಮತ್ತು ಅನಾರೋಗ್ಯ ಪೀಡಿತರಿಗೆ ತುರ್ತಾಗಿ ರಕ್ತ ನೀಡಲು ಸಹಾಯವಾಗಲಿದೆ’ ಎಂದು ಹೇಳಿದರು.
‘ರೋಗಿಗಳಿಗೆ ರಕ್ತದ ಅವಶ್ಯಕತೆಯಿಂದ ನಿಮ್ಮ ಸಹಾಯ ಅತ್ಯಗತ್ಯವಾಗಿದೆ. ರಕ್ತ ನೀಡುವುದರಿಂದ ಯಾವುದೇ ಸಮಸ್ಯೆಗಳಿಲ್ಲ. ಹಾಗಾಗಿ ಉತ್ಸುಕರಾಗಿ ರಕ್ತದಾನ ಮಾಡಿದರೆ ಸ್ವಾಸ್ಥ್ಯ ಸಮಾಜಕ್ಕೆ ನಿರ್ಮಾಣಕ್ಕೆ ನಿಮ್ಮ ಕೊಡುಗೆ ಸಿಕ್ಕಿದಂತಾಗುತ್ತದೆ’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಮಾತನಾಡಿ, ‘ಇಂತಹ ಶಿಬಿರದಿಂದ ಸಾವಿರಾರು ಜನರ ಜೀವ ಉಳಿಸುವ ಭಾಗ್ಯ ಸಿಗಲಿದೆ. ಆ ಮೂಲಕ ಹೆಚ್ಚೆಚ್ಚು ದಾನಿಗಳು ರಕ್ತದಾನ ಮಾಡುವುದರ ಮೂಲಕ ಆರೋಗ್ಯ ಅನಾರೋಗ್ಯ ಪೀಡಿತರಿಗೆ ಆದಷ್ಟು ಬೇಗ ಅವರ ಸುಧಾರಣೆಗೆ ಸಹಕಾರಿಯಾಗಲಿದೆ’ ಎಂದು ಹೇಳಿದರು.
ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಶರೀಫ್ ಅಧ್ಯಕ್ಷತೆ ವಹಿಸಿದ್ದರು. 40ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.
ಕಾರ್ಯದರ್ಶಿ ಸಚಿನ್, ಸಿ.ಸಿ.ಸುನಿಲ್, ವಿಶ್ವನಾಥ್, ನಾರಾಯಣ, ಅಶ್ರಫ್, ಕಲಂದರ್, ಮಡಿಕೇರಿ ವೈದ್ಯಕೀಯ ಮತ್ತು ವಿಜ್ಞಾನ ಕೇಂದ್ರದ ಕಾರ್ತಿಕ್, ಪೂರ್ಣಿಮಾ, ಸೌಮ್ಯ ಪಂಚಲಿಂಗೇಶ್ವರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.