ADVERTISEMENT

ಸುಂಟಿಕೊಪ್ಪ | ಐಗೂರು ಯಂಗ್ ಚಾಲೆಂಜರ್ಸ್ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಮೇ 2025, 5:49 IST
Last Updated 21 ಮೇ 2025, 5:49 IST
ಸುಂಟಿಕೊಪ್ಪ ಸಮೀಪದ ಮಾದಾಪುರ ಹಿಂದೂ ಮಲಯಾಳಿ ಕುಟುಂಬದ ವತಿಯಿಂದ ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕೊಡಗು ಹಿಂದು ಮಲಯಾಳಿ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಐಗೂರು ಯಂಗ್ ಚಾಲೆಂಜರ್ಸ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.
ಸುಂಟಿಕೊಪ್ಪ ಸಮೀಪದ ಮಾದಾಪುರ ಹಿಂದೂ ಮಲಯಾಳಿ ಕುಟುಂಬದ ವತಿಯಿಂದ ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕೊಡಗು ಹಿಂದು ಮಲಯಾಳಿ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಐಗೂರು ಯಂಗ್ ಚಾಲೆಂಜರ್ಸ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.   

ಸುಂಟಿಕೊಪ್ಪ: ಸಮೀಪದ ಮಾದಾಪುರ ಹಿಂದೂ ಮಲಯಾಳಿ ಕುಟುಂಬದ ವತಿಯಿಂದ ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕೊಡಗು ಹಿಂದೂ ಮಲಯಾಳಿ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಐಗೂರು ಯಂಗ್ ಚಾಲೆಂಜರ್ಸ್ ತಂಡವು ಜಯಗಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು‌.

ಕ್ರಿಕೆಟ್ ಫೈನಲ್ ಪಂದ್ಯವು ಯಂಗ್ ಚಾಲೆಂಜರ್ಸ್ ಐಗೂರು  ಹಾಗೂ ಇಲೆವನ್ ಸ್ಟಾರ್ ಕಂಬಿಬಾಣೆ ತಂಡಗಳ ನಡುವೆ ರೋಚಕ ಪಂದ್ಯ ನಡೆಯಿತು‌.

ಮೊದಲು ಬ್ಯಾಟಿಂಗ್‌ ಮಾಡಿದ ಕಂಬಿಬಾಣೆ ತಂಡ ನಿಗದಿತ 6 ಓವರ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 48 ರನ್‌ಗಳನ್ನು ಹೊಡೆಯಲು ಶಕ್ತವಾಯಿತು‌‌‌. 49 ರನ್ ಗಳ ಗುರಿ ಬೆನ್ನತ್ತಿದ ಐಗೂರು ತಂಡ ಬ್ಯಾಂಟಿಂಗ್‌ ಆರಂಭಿಸಿ , 5 ವಿಕೆಟ್‌ಗಳನ್ನು ಕಳೆದುಕೊಂಡು , 3 ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿದರು.

 ಯಂಗ್ ಚಾಲೆಂಜರ್ಸ್ ಐಗೂರು ತಂಡವು ಮಲಯಾಳಿ ಕಪ್‌ ಹಾಗೂ ₹ 33,000 ನಗದು ತನ್ನದಾಗಿಸಿಕೊಂಡರೆ, ಕಂಬಿಬಾಣೆ ತಂಡವು ₹ 22,000 ಹಾಗೂ ಟ್ರೋಫಿಯನ್ನು ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಐಗೂರು ತಂಡದ ಬಿ.ಅಭಿಜಿತ್ ಔಟಾಗದೆ 27 ರನ್ ಬಾರಿಸುವ ಮೂಲಕ ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿ ಪಡೆದುಕೊಂಡರು.

ADVERTISEMENT

ಮಹಿಳಾ ಕ್ರಿಕೆಟ್‌ನಲ್ಲಿ ಮಾಲ್ದಾರೆ ಪ್ರಥಮ ಹಾಗೂ ಹಟ್ಟಿಹೊಳೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
ಮಹಿಳೆಯರ ವಿಭಾಗದ ಹಗ್ಗ ಜಗ್ಗಾಟದಲ್ಲಿ ಐಗೂರು ಭಜರಂಗಿ ಪ್ರಥಮ, ಮಾಲ್ದಾರೆ ದ್ವಿತೀಯ ಸ್ಥಾನ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.