ADVERTISEMENT

ಸುಂಟಿಕೊಪ್ಪ | ಕಾಳುಮೆಣಸು ಕಳವು; ಬಂಧನ

​ಪ್ರಜಾವಾಣಿ ವಾರ್ತೆ
Published 2 ಮೇ 2024, 15:12 IST
Last Updated 2 ಮೇ 2024, 15:12 IST

ಸುಂಟಿಕೊಪ್ಪ: ಕಣದಲ್ಲಿ ಒಣಗಿಸಲು ಹಾಕಿದ್ದ ಕಾಳುಮೆಣಸು (ಕರಿಮೆಣಸು) ಕಳವುಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸುಂಟಿಕೊಪ್ಪ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಮಧುರಮ್ಮ ಬಡಾವಣೆಯ ನಿವಾಸಿ ಎಲ್.ಮಹೇಶ್ (42) ಆರೋಪಿ. ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ.

ನಾಕೂರು ಶಿರಂಗಾಲ ಗ್ರಾಮದ ಭಾಗ್ಯಲಕ್ಷ್ಮಿ ಎಂಬವರಿಗೆ ಸೇರಿದ ಲಕ್ಷ್ಮಿ ತೋಟದಲ್ಲಿ ಏ.7 ರಂದು ತಡರಾತ್ರಿ ಮಹೇಶ್  ಹಾಗೂ ಸಂಗಡಿಗ ಕಣದಲ್ಲಿ ಒಣಗಿಸಿಟ್ಟಿದ್ದ 120 ಕೆ.ಜಿ ಕರಿಮೆಣಸನ್ನು ಕದ್ದು, ಮಾರುತಿ ಕಾರಿನಲ್ಲಿ ಸಾಗಿಸಿದ್ದರು. ಕರಿಮೆಣಸು ಮಹೇಶ್ ಅವರ ಮನೆಯಲ್ಲಿ ಪತ್ತೆಯಾಗಿದೆ.

 ಭಾಗ್ಯ ಲಕ್ಷ್ಮಿ ನೀಡಿದ ದೂರಿನನ್ವಯ ಸುಂಟಿಕೊಪ್ಪ ಪೊಲೀಸರು ಗುರುವಾರ ಇಲ್ಲಿನ ಟಿಸಿಎಲ್ ತೋಟಕ್ಕೆ ತೆರಳುವ ರಸ್ತೆಯಲ್ಲಿ ಮಹೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ನೀಡಲಾಗಿದೆ.

ADVERTISEMENT

ಸುಂಟಿಕೊಪ್ಪ ಪಿಎಸ್ಐ ಶ್ರೀಧರ್, ಕ್ರೈಂ ಪಿಎಸ್ಐ ನಾಗರಾಜು, ಸಿಬ್ಬಂದಿ  ಸತೀಸ್, ಪ್ರವೀಣ, ಜಗದೀಶ್, ಲೀಲಾವತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.