ADVERTISEMENT

ಕುಶಾಲನಗರ: ಹುಲಿ ಮೃತದೇಹ ಅಂತ್ಯಕ್ರಿಯೆ; ಶ್ವಾನದಳದಿಂದ ಶೋಧ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:56 IST
Last Updated 17 ಡಿಸೆಂಬರ್ 2025, 6:56 IST
<div class="paragraphs"><p>ಮಡಿಕೇರಿ ಸಮೀಪದ ಚೆಟ್ಟಳ್ಳಿ ಶ್ರೀಮಂಗಲದ ತೋಟವೊಂದರಲ್ಲಿ ಹುಲಿಯೊಂದರ ಮೃತದೇಹ ಮಂಗಳವಾರ ದೊರಕಿದೆ</p></div>

ಮಡಿಕೇರಿ ಸಮೀಪದ ಚೆಟ್ಟಳ್ಳಿ ಶ್ರೀಮಂಗಲದ ತೋಟವೊಂದರಲ್ಲಿ ಹುಲಿಯೊಂದರ ಮೃತದೇಹ ಮಂಗಳವಾರ ದೊರಕಿದೆ

   

ಕುಶಾಲನಗರ: ಕುಶಾಲನಗರ ವಲಯ ಮೀನುಕೊಲ್ಲಿ ಶಾಖೆಯ ಚೆಟ್ಟಳ್ಳಿ ಸಮೀಪದ ಶ್ರೀಮಂಗಲ ಗ್ರಾಮದ ಕಾಫಿ ತೋಟದಲ್ಲಿ ಪತ್ತೆಯಾದ 8 ವರ್ಷದ ಗಂಡು ಹುಲಿಯ ಅಂತ್ಯಕ್ರಿಯೆ ನಡೆಯಿತು.

ಹುಲಿಯ ಕಳೇಬರವನ್ನು ಅತ್ತೂರು ಮೀಸಲು ಅರಣ್ಯಕ್ಕೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ADVERTISEMENT

ಈ ಹಿಂದೆಯೆ ಉರುಳಿಗೆ ಸಿಲುಕಿ ಗಾಯಗೊಂಡಿದ್ದ ಈ ಹುಲಿ ತೋಟದಲ್ಲಿ ಮೃತಪಟ್ಟಿದೆ. ಹೀಗಾಗಿ, ಮೃತದೇಹ ಪತ್ತೆಯಾದ ಸ್ಥಳಕ್ಕೆ ವಿಶೇಷ ಹುಲಿ ಸಂರಕ್ಷಣಾ ದಳದ ಶ್ವಾನವನ್ನು ಕರೆಸಿ ಪರಶೀಲಿಸಲಾಯಿತು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಂದೀಲ್ ಕುಮಾರ್, ಎ.ಎ ಗೋಪಾಲ್, ವಲಯ ಅರಣ್ಯಾಧಿಕಾರಿ ಆರ್.ರಕ್ಷಿತ್,  ಪಶು ವೈದ್ಯಾಧಿಕಾರಿಗಳಾದ ಡಾ.ಮುಜೀಬುರ್ ರೆಹಮಾನ್, ಸಂಜೀವ್ ಕುಮಾರ್ ಶಿಂಧೆ, ಉಪ ವಲಯ ಅರಣಾಧಿಕಾರಿಗಳಾದ ಕೆ.ಪಿ ರಂಜನ್. ಸಚಿನ್ ನಿಂಬಾಳ್ಳರ್,ವೆಂಕಟೇಶ್,ಜಗದೀಶ್, ಗಸ್ತು ಅರಣ್ಯ ಪಾಲಕರಾದ ನಾಗರಾಜ. ಸಿದ್ದರಾಜು, ಎನ್‌ಟಿಸಿಎ ನಾಮನಿರ್ದೇಶಿತ ಸದಸ್ಯ ಕೆ.ಎನ್ ಬೋಸ್ ಮಾದಪ್ಪ, ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಸದಸ್ಯ ಅಯ್ಯಪ್ಪ, ಚಟ್ನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿಂಧು, ಪಿಡಿಒ ಕಲ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.