ಸಾವು
ಪ್ರಾತಿನಿಧಿಕ ಚಿತ್ರ
ಸೋಮವಾರಪೇಟೆ (ಕೊಡಗು ಜಿಲ್ಲೆ): ತೆಲಂಗಾಣದಿಂದ ಇಲ್ಲಿಗೆ ಸಮೀಪದ ಮಲ್ಲಳ್ಳಿ ಜಲಪಾತ ನೋಡಲು ಬಂದಿದ್ದ ಪ್ರವಾಸಿಗ ಉಜ್ವಲ್ ಪ್ರದೀಪ್‌ಕುಮಾರ್ (36) ಎಂಬುವವರು ಎದೆನೋವಿನಿಂದ ಮೃತಪಟ್ಟರು.
ಜಲಪಾತ ನೋಡಲು ಕಾರಿನಲ್ಲಿ ಬಂದಿದ್ದರು. ಜಲಪಾತ ವೀಕ್ಷಿಸಿ ವಾಪಸ್ ಬರುವಾಗ ಎದೆನೋವು ಕಾಣಿಸಿಕೊಂಡು ಅಸ್ವಸ್ಥಗೊಂಡರು. ಅವರನ್ನು ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.