ADVERTISEMENT

‘ವಸುದೈವ ಕುಟುಂಬ ಕಲ್ಪನೆಯಂತೆ ಬದುಕಿ’

ಸಂತ ಮೇರಿ ವಿದ್ಯಾಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 3:07 IST
Last Updated 11 ಡಿಸೆಂಬರ್ 2025, 3:07 IST
ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾದ್ಯಮ ವಿದ್ಯಾಸಂಸ್ಥೆಗಳ ವತಿಯಿಂದ ಮಂಗಳವಾರ ರಾತ್ರಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ರಿಯಾಲಿಟಿ ಶೋನ ಸ್ಪರ್ಧೆ ಸಿಂಚನ ಉದ್ಘಾಟಿಸಿದರು.
ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾದ್ಯಮ ವಿದ್ಯಾಸಂಸ್ಥೆಗಳ ವತಿಯಿಂದ ಮಂಗಳವಾರ ರಾತ್ರಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ರಿಯಾಲಿಟಿ ಶೋನ ಸ್ಪರ್ಧೆ ಸಿಂಚನ ಉದ್ಘಾಟಿಸಿದರು.   

ಸುಂಟಿಕೊಪ್ಪ: ‘ವಿವಿಧ ಭಾಷೆ, ಜಾತಿ, ಪಂಗಡಗಳ ಮೂಲಕ ಮನುಷ್ಯರಲ್ಲಿ ಒಡಕು ಮೂಡಿದ್ದು, ಅವೆಲ್ಲವನ್ನು ಮೀರಿ ವಸುದೈವ ಕುಟುಂಬದಂತೆ ಒಂದಾಗಿ ಬದುಕಬೇಕು’ ಎಂದು ಮೈಸೂರು ಪ್ರಾಂತ್ಯದ ಧರ್ಮಾಧ್ಯಕ್ಷ ಎಸ್.ಜೆ.ಪ್ರಾನ್ಸಿಸ್ ಸೆರವೋ ಹೇಳಿದರು.

ಇಲ್ಲಿನ ಸಂತ ಮೇರಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ತನ್ನ ನೋವಿನ ಜೊತೆಯಲ್ಲಿ ಪರರ ನೋವನ್ನು ಅರಿತು ಅವರಿಗೆ ಸಾಂತ್ವನ ಮತ್ತು ಸಮಾಧಾನ ಮಾಡಿದರೆ ನಿಜವಾದ ಮನಷ್ಯರಾಗಲು ಸಾಧ್ಯ’ ಎಂದರು.

ಡಿಡಿಪಿಐ ಬಸವರಾಜು ಮಾತನಾಡಿ, ‘ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಅತ್ಯಗತ್ಯ. ಶಿಕ್ಷಣ ಸಂಸ್ಕಾರ, ಬದುಕಿನ ಮೌಲ್ಯವನ್ನು ಹೆಚ್ಚಿಸುವುದರ ಜೊತೆಗೆ ಜೀವನದ ಕೌಶಲವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಶ್ರಮ, ಆಸಕ್ತಿ ಇದ್ದಾಗ ಮಾತ್ರ ಗುರಿಯನ್ನು ತಲುಪಲು ಸಾಧ್ಯ’ ಎಂದರು.

ADVERTISEMENT

ಮೈಸೂರು ಎಂಡಿಇಎಸ್ ಕಾರ್ಯದರ್ಶಿ ರೆ.ಫಾ‌.ಎಡ್ವರ್ಡ್ ಸಾಲ್ಡಾನಾ ಮಾತನಾಡಿದರು.

ವಾರ್ಷಿಕೋತ್ಸವವನ್ನು ಕಲಾವಿದೆ ಸಿಂಚನ ಉದ್ಘಾಟಿಸಿದರು. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ, ನಾಟಕ, ಕಲಾ ವೈಭವ ಮತ್ತು ಕರಾಟೆ ಪ್ರದರ್ಶನ ನಡೆಯಿತು.

ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಒ ವಿ.ಜಿ. ಲೋಕೇಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪಿ.ಎಂ.ಲತೀಫ್, ವಿರಾಜಪೇಟೆ ಸಂತ ಅನ್ನಮ್ನ ದೇವಾಲಯದ ಧರ್ಮಗುರು ಜೇಮ್ಸ್ ಡೊಮಿನಿಕ್, ವಿರಾಜಪೇಟೆ ಸಂತ ಅನ್ನಮ್ಮನವರ ಕಾಲೇಜು ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ಮಧುಲೈ ಮುತ್ತು, ಮಡಿಕೇರಿ ಸಂತ ಮೈಕಲರ ದೇವಾಲಯ ಧರ್ಮಗುರು ಜಾರ್ಜ್ ದೀಪಕ್, ಹಟ್ಟೀಹೊಳೆ ನಿರ್ಮಲ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಗಿಲ್ಬರ್ಟ್ ಡಿಸಿಲ್ವಾ, ಪೊನ್ನಂಪೇಟೆ ಚರ್ಚ್‌ನ ಮಾನ್ಯುಯಲ್ ಡಿಸೋಜಾ, ಮೈಸೂರು ಧರ್ಮಗುರು ನವೀನ್ ಕುಮಾರ್, ಸೋಮವಾರಪೇಟೆ
ಸಂತ ಜೋಸೆಪರ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಅವಿನಾಶ್, ಸುಂಟಿಕೊಪ್ಪ ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜೋವಿಟಾವಾಜ್, ಸಂತ ಮೇರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ವ್ಯವಸ್ಥಾಪಕ ಫಾ.ವಿಜಯಕುಮಾರ್, ಮುಖ್ಯ ಶಿಕ್ಷಕ ಸೆಲ್ವರಾಜ್, ಶಿಕ್ಷಕರಾದ ಬಿಜು, ಹಮೀದ್ , ಚಂದ್ರಶೇಖರ್, ಬಬಿತ ಉಪಸ್ಥಿತರಿದ್ದರು.

ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾದ್ಯಮ ವಿದ್ಯಾಸಂಸ್ಥೆಗಳ ವತಿಯಿಂದ ಮಂಗಳವಾರ ರಾತ್ರಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ರಿಯಾಲಿಟಿ ಶೋನ ಸ್ಪರ್ಧೆ ಸಿಂಚನ ಉದ್ಘಾಟಿಸಿದರು.
ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ರಾತ್ರಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಸುಂಟಿಕೊಪ್ಪ ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸುಂಟಿಕೊಪ್ಪ ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.