ಸೋಮವಾರಪೇಟೆ: ಇಲ್ಲಿಗೆ ಸಮೀಪದ ಐಗೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮುತ್ತಪ್ಪ ದೇಗುಲ ಪುನರ್ ಪ್ರತಿಷ್ಠಾಪನೆ ಪ್ರಯುಕ್ತ ಭಾನುವಾರ ಸಂಜೆ ನಡೆದ ವಿವಿಧ ದೇವರ ವೆಳ್ಳಾಟಂ ದೇವಾಲಯಕ್ಕೆ ಆಗಮಿಸಿದ್ದ ಭಕ್ತರ ಗಮನ ಸೆಳೆಯಿತು.
ಶ್ತೀ ಮುತ್ತಪ್ಪನ್ ಮತ್ತು ಶ್ರೀ ತಿರುವಪ್ಪನ್ ಕೋಲ, ಶ್ರೀ ಕುಟ್ಟಿಚಾತನ್ ಹಾಗೂ ಶ್ರೀ ಗುಳಿಗನ್ ವೆಳ್ಳಾಟಂ ಆಕರ್ಷಕವಾಗಿತ್ತು. ಶನಿವಾರದಿಂದಲೂ ದೇವಾಲಯದ ಪೂಜಾ ಕಾರ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳಾದಿಯಾಗಿ ಐಗೂರು ಗ್ರಾಮಸ್ಥರೊಂದಿಗೆ, ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.