ADVERTISEMENT

ವಿರಾಜಪೇಟೆ- ಕೇರಳ ರಸ್ತೆ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 31 ಮೇ 2024, 18:15 IST
Last Updated 31 ಮೇ 2024, 18:15 IST
<div class="paragraphs"><p>ಪ್ರಾತನಿನಿಧಿಕ ಚಿತ್ರ</p></div>

ಪ್ರಾತನಿನಿಧಿಕ ಚಿತ್ರ

   

ಮಡಿಕೇರಿ: ವಿರಾಜಪೇಟೆ- ಕೇರಳ ರಸ್ತೆಗೆ ಶುಕ್ರವಾರ ರಾತ್ರಿ ಭಾರಿ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮಾಕುಟ್ಟ ಚೆಕ್ ಪೋಸ್ಟ್ ಸಮೀಪ ಬಿದ್ದಿರುವ ಈ ಮರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೇನುಗೂಡುಗಳು ಇದ್ದವು. ಜೇನ್ನೋಣಗಳೆಲ್ಲವೂ ಹಾರಾಡುತ್ತಿದ್ದು ವಾಹನಗಳಲ್ಲಿರುವ ಪ್ರಯಾಣಿಕರು ಪರದಾಡುತ್ತಿದ್ದಾರೆ. ತಕ್ಷಣವೆ ಮರ ತೆರವುಗೊಳಿಸುವಂತೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ತಿಳಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.