ADVERTISEMENT

ವಿರಾಜಪೇಟೆ: ಅಯ್ಯಪ್ಪ ದೇವಸ್ಥಾನದಲ್ಲಿ ಮಹಾಚಂಡಿಕಾ ಹೋಮ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 13:57 IST
Last Updated 21 ಏಪ್ರಿಲ್ 2025, 13:57 IST
ವಿರಾಜಪೇಟೆ ಸಮೀಪದ ಬೇಟೋಳಿ ರಾಮನಗರದ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಮಹಾಚಂಡಿಕಾ ಹೋಮ ನಡೆಯಿತು
ವಿರಾಜಪೇಟೆ ಸಮೀಪದ ಬೇಟೋಳಿ ರಾಮನಗರದ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಮಹಾಚಂಡಿಕಾ ಹೋಮ ನಡೆಯಿತು   

ವಿರಾಜಪೇಟೆ: ಸಮೀಪದ ಬೇಟೋಳಿ ರಾಮನಗರದಲ್ಲಿರುವ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ,  ಸತ್ಯನಾರಾಯಣ ಪೂಜೆ ಹಾಗೂ ಮಹಾಚಂಡಿಕಾ ಹೋಮವು ಶ್ರದ್ಧಾ ಭಕ್ತಿಯಿಂದ ಸೋಮವಾರ ನಡೆಯಿತು.

ಸೋಮವಾರ ಮುಂಜಾನೆ ಮಹಾಗಣಪತಿ, ಅಯ್ಯಪ್ಪ, ನಾಗ, ವನದುರ್ಗಾ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮಹಾಗಣಪತಿ ಹೋಮವು ಹಾಗೂ ಸಂಕಲ್ಪ ನಡೆಯಿತು. ಲಕ್ಷ್ಮಿ ಸತ್ಯನಾರಾಯಣ ಪೂಜೆ, ಮಹಾ ಚಂಡಿಕಾ ಹವನ, ಅಲಂಕಾರ ಸೇವೆ, ಕುಂಕುಮಾರ್ಚನೆ, ನೈವೇದ್ಯ ಅಭಿಷೇಕ ಸೇವೆಗಳು ನಡೆದವು.

ಧಾರ್ಮಿಕ ಕಾರ್ಯಕ್ರಮವನ್ನು ಪುತ್ತೂರಿನ ಪ್ರವೀಣ್ ಭಟ್ ಅವರ ನೇತೃತ್ವದ ಅರ್ಚಕರ ತಂಡ ಕೈಗೊಂಡಿತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯವರು, ವಿರಾಜಪೇಟೆ ನಗರ, ಬೇಟೋಳಿ, ಹೆಗ್ಗಳ, ಆರ್ಜಿ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.