ವಿರಾಜಪೇಟೆ: ಕಳೆದ ಕೆಲವು ದಿನಗಳಿಂದ ಆರ್ಭಟಿಸುತ್ತಿದ್ದ ಮಳೆಯು ಮಂಗಳವಾರ ಕೊಂಚ ಇಳಿಮುಖಗೊಂಡಿದೆ.
ಆಗಾಗ್ಗೆ ಬಿಡುವು ನೀಡುತ್ತಾ ಮಳೆಯು ಸುರಿಯಿತು. ಮಳೆ ಇಳಿಮುಖಗೊಂಡಿರುವುದು ಜನತೆಗೆ ಸ್ವಲ್ಪ ನೆಮ್ಮದಿ ತರಿಸಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಹಳ್ಳಕೊಳ್ಳ ಹಾಗೂ ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಮಟ್ಟದಲ್ಲಿಯೇ ಇದೆ.
ಸೋಮವಾರ ರಾತ್ರಿ ಉತ್ತಮ ಪ್ರಮಾಣದಲ್ಲಿ ಮಳೆಯಾಗಿದೆ. ಅರುವತ್ತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಟ್ಟುವಿನ ಚಿಮ್ಮಿಚ್ಚಿರ ಕೆ.ಅಬ್ದುಲ್ಲಾ ಎಂಬುವವರ ಮನೆ ಕುಸಿದಿದೆ. ವಾಸದ ಮನೆ ಸಂಪೂರ್ಣ ಹಾನಿಗೊಳಗಾಗಿದ್ದು, ಸಾಕಷ್ಟು ನಷ್ಟವುಂಟಾಗಿದೆ. ಯಾವುದೇ ಜೀವಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.