ವಿರಾಜಪೇಟೆ: ವಿರಾಜಪೇಟೆ ನಗರ ಹಾಗೂ ತಾಲ್ಲೂಕು ವರ್ತಕರ ನೂತನ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪಟ್ಟಣದ ಗಾಂಧಿನಗರದ ಪಿ.ಎ. ಮಂಜುನಾಥ್ ಆಯ್ಕೆಯಾಗಿದ್ದಾರೆ.
ಪಟ್ಟಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಘದ ಉಪಾಧ್ಯಕ್ಷರಾಗಿ ಪಿ.ರಂಜಿ ಪೂಣಚ್ಚ, ಪ್ರದಾನ ಕಾರ್ಯದರ್ಶಿಯಾಗಿ ಎ.ಎಚ್. ಮತೀನ್, ಖಜಾಂಚಿಯಾಗಿ ಆರ್. ಸುರೇಶ್, ನಿರ್ದೇಶಕರಾಗಿ ಡಿ.ಪಿ.ರಾಜೇಶ್, ಕೆ.ಎಚ್. ಮಹಮ್ಮದ್ ರಾಫಿ, ಆರ್. ರಾಜೇಶ್ ಶೇಟ್, ಟಿ.ಜೆ. ವೆಂಕಟೇಶ್, ಶಶಿ ಕೆ.ಆರ್, ಮಹಮ್ಮದ್ ಹನೀಫ್, ಹಸನ್ ಮನ್ನ, ಮದನ್ ಲಾಲ್, ಎಸ್.ಕೆ. ಚೇತನ್ ಚೌಧರಿ, ಕಾನೂನು ಸಲಹೆಗಾರರಾಗಿ ವಕೀಲರಾದ ಪ್ರೀತಂ, ಸದಸ್ಯರಾಗಿ ಟಿ.ಆರ್. ಹರ್ಷ, ರಜಾಕ್ ಕೆ.ಎಸ್. ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ನೂತನ ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿ, ವರ್ತಕರ ಶ್ರೇಯೋಭಿವೃದ್ಧಿಗಾಗಿ ಸಂಘವನ್ನು ರಚಿಸಲಾಗಿದೆ. ವರ್ತಕರು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ವ್ಯಾಪಾರಿಗಳ ನಡುವೆ ಒಗ್ಗಟ್ಟನ್ನು ಮೂಡಿಸುವುದು ಮತ್ತು ಸಂಘಟಿಸುವುದು ಸಂಘದ ಉದ್ದೇಶ ಎಂದರು.
ನಿರ್ದೇಶಕ ರಾಜೇಶ್ ಶೇಟ್ ಮಾತನಾಡಿ, ವರ್ತಕರಿಗೆ ಏನೇ ಸಮಸ್ಯೆಯಾದಾಗ ತಕ್ಷಣ ಸ್ಪಂದಿಸುವ ಉದ್ದೇಶದಿಂದ ಸಂಘ ರಚನೆಯಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಎಸ್.ಎಚ್. ಮತೀನ್, ನಿರ್ದೇಶಕ ಮಹಮ್ಮದ್ ರಾಫಿ ಹಾಗೂ ಖಜಾಂಚಿ ಸುರೇಶ್ ಮಾತನಾಡಿದರು.
ಸಭೆಯಲ್ಲಿ ನಿರ್ದೇಶಕ ಡಿ.ಪಿ.ರಾಜೇಶ್, ಟಿ.ಜೆ. ವೆಂಕಟೇಶ್, ಶಶಿ ಕೆ.ಆರ್, ಮಹಮ್ಮದ್ ಹನೀಫ್ ಎಂ.ಎಸ್. ಹಸನ್ ಮನ್ನ, ಮದನ್ ಲಾಲ್, ಎಸ್.ಕೆ. ಚೇತನ್ ಚೌಧರಿ ಹಾಗೂ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.