ADVERTISEMENT

ಸೋಮವಾರಪೇಟೆ | ಕಾಡಾನೆ ದಾಳಿ: ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 7:07 IST
Last Updated 11 ಫೆಬ್ರುವರಿ 2024, 7:07 IST
ಸೋಮವಾರಪೇಟೆ ಸಮೀಪದ ಕಾಜೂರು ಮೀಸಲು ಅರಣ್ಯದ ವ್ಯಾಪ್ತಿಯ ಹೈವೆಯಲ್ಲಿ ಒಂಟಿ ಸಲಗ ಹಾವಳಿ ಮಾಡಿ, ಟಾಟಾ ಕಾಫಿ ತೋಟದ ಗೇಟ್ ಮುರಿದು ಅರಣ್ಯಕ್ಕೆ ತೆರಳುತ್ತಿರುವುದು.
ಸೋಮವಾರಪೇಟೆ ಸಮೀಪದ ಕಾಜೂರು ಮೀಸಲು ಅರಣ್ಯದ ವ್ಯಾಪ್ತಿಯ ಹೈವೆಯಲ್ಲಿ ಒಂಟಿ ಸಲಗ ಹಾವಳಿ ಮಾಡಿ, ಟಾಟಾ ಕಾಫಿ ತೋಟದ ಗೇಟ್ ಮುರಿದು ಅರಣ್ಯಕ್ಕೆ ತೆರಳುತ್ತಿರುವುದು.   

ಸೋಮವಾರಪೇಟೆ: ಮಡಿಕೇರಿ–ಹಾಸನ ಹೆದ್ದಾರಿಯ ಕಾಜೂರು ಅರಣ್ಯ ಪ್ರದೇಶದ ಬಳಿ ಶನಿವಾರ ಒಂಟಿ ಸಲಗ ಆರ್.ಆರ್.ಟಿ ಸಿಬ್ಬಂದಿ ಮತ್ತು ಅರಣ್ಯ ರಕ್ಷಕರನ್ನು ಬೆನ್ನಟ್ಟಿದ್ದು,  ಕೂದಲೆಳೆ ಅಂತರದಿಂದ ಅವರು ಪಾರಾಗಿದ್ದಾರೆ.

ಬೆಳಿಗ್ಗೆ  ಕಾಜೂರು ಸಮೀಪದ ಕೋವರ್ ಕೊಲ್ಲಿಯ ಟಾಟಾ ಕಾಫಿ ಎಸ್ಟೇಟ್‌ನಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗದ ಮಾಹಿತಿ ಲಭಣಿಸಿ ತೆರಳಿದ ಆರ್.ಆರ್.ಟಿ ತಂಡದ ದರ್ಶನ್, ಹರ್ಷಿತ್, ವಿನೋದ್ ಹಾಗೂ ಅರಣ್ಯ ರಕ್ಷಕರಾದ ಶ್ರೀಕಾಂತ್  ಅದನ್ನು ಅರಣ್ಯಕ್ಕೆ ಓಡಿಸಲು ಪ್ರಯತ್ನಿಸಿದ್ದರು.  ಕಾಡಾನೆಯೇ ಅರಣ್ಯ ಸಿಬ್ಬಂದಿಯನ್ನು ಬೆನ್ನಟ್ಟಿದೆ.

ಸೋಮವಾರಪೇಟೆ ಸಮೀಪದ ಕಾಜೂರು ಮೀಸಲು ಅರಣ್ಯದ ವ್ಯಾಪ್ತಿಯ ಹೈವೆಯಲ್ಲಿ ಒಂಟಿ ಸಲಗ ಅರಣ್ಯ ಸಿಬ್ಬಂದಿಗಳ ಬೈಕ್ ತುಳಿದು ಜಖಂಗೊಳಿಸಿದೆ.

 
ಬೈಕನ್ನು ರಸ್ತೆಯಲ್ಲೇ ಬಿಟ್ಟು ಸಿಬ್ಬಂದಿ ಓಡಿ ತಪ್ಪಿಸಿಕೊಂಡಿದ್ದಾರೆ. ಸಲಗ ಬೈಕ್‌ ಹಾಗೂ ಎಸ್ಟೇಟ್ ಗೇಟ್ ಮುರಿದು  ಮೀಸಲು ಅರಣ್ಯ ಪ್ರವೇಶಿಸಿದೆ. ತಾಲ್ಲೂಕಿನ ಅರಣ್ಯದಂಚಿನ ಯಡವನಾಡು, ಬಾಣವಾರ, ಮಾಲಂಬಿ, ಕೊಡ್ಲಿಪೇಟೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ಬೀಡುಬಿಟ್ಟಿವೆ.  ವಾಹನ ಸವಾರರು ಸಂಚರಿಸಲು ಭಯಪಡುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ADVERTISEMENT
ಸೋಮವಾರಪೇಟೆ ಸಮೀಪದ ಕಾಜೂರು ಮೀಸಲು ಅರಣ್ಯದ ವ್ಯಾಪ್ತಿಯ ಹೈವೆಯಲ್ಲಿ ಒಂಟಿ ಸಲಗ ಹಾವಳಿ ಮಾಡಿ ಟಾಟಾ ಕಾಫಿ ತೋಟದ ಗೇಟ್ ಮುರಿದಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.