ADVERTISEMENT

ಕೃಷಿ ವಿಜ್ಞಾನ ಕೇಂದ್ರ: ನೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 9:20 IST
Last Updated 11 ಫೆಬ್ರುವರಿ 2012, 9:20 IST

ಕೋಲಾರ: ನಗರದ ಹೊರವಲಯದ ಟಮಕದ ಹಲಸಿನ ತೋಟದಲ್ಲಿ ಸ್ಥಾಪನೆಯಾದ ಕೃಷಿ ವಿಜ್ಞಾನ ಕೇಂದ್ರಕ್ಕೆ ಅಗತ್ಯ ಜಮೀನನ್ನು ಕೂಡಲೇ ಪಹಣಿ ಮಾಡಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾ ಸಮಿತಿ ಪ್ರಮುಖರು ಗುರುವಾರ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಿದರು.

ಕಳೆದ ವರ್ಷವೇ ಕೇಂದ್ರ ಸಚಿವಾಲಯ 17 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪ ನೆಗೆ ಮಂಜೂರಾತಿ ನೀಡಿದೆ. ಆದರೆ ಈ ಜಾಗ ಪಹಣಿಯಲ್ಲಿ ಇನ್ನೂ ತೋಟ ಗಾರಿಕಾ ಇಲಾಖೆಗೆ ವರ್ಗಾವಣೆ ಯಾಗಿಲ್ಲ. ಪರಿಣಾಮ ಕೇಂದ್ರ ಕೈತಪ್ಪಿ ಹೋಗುವ ಸನ್ನಿವೇಶ ನಿರ್ಮಾಣ ವಾಗಿದೆ ಎಂದು ಆತಂಕ ವ್ಯಕ್ತ ಪಡಿಸಿದರು.

ಕೃಷಿ ವಿಜ್ಞಾನ ಕೇಂದ್ರ ಆರಂಭವಾದರೆ ಜಿಲ್ಲೆಯ ರೈತರಿಗೆ ಬಹಳ ಅನುಕೂಲವಾಗಲಿದೆ. ಕೇಂದ್ರದಿಂದ ಪ್ರತಿವರ್ಷ 5 ಕೋಟಿ ರೂಗಳ ಅನುದಾನ ದೊರೆಯಲಿದೆ. ಕೃಷಿ ಸಚಿವರು ಕೂಡಲೇ   ಸಂಬಂಧ ಪಟ್ಟ ಇಲಾಖೆಗೆ ತೋಟಗಾರಿಕೆ ವಿಶ್ವವಿದ್ಯಾಲಯದ ಹೆಸರಿಗೆ ಜಮೀನಿನ ಪಹಣಿ ಮಾಡಿಸಿಕೊಡಬೇಕು ಎಂದು ಕೋರಿದರು.

ಸಮಿತಿಯ ಮುಖಂಡರಾದ ಕೆ.ಶ್ರೀನಿವಾಸಗೌಡ, ಎಂ.ನಾಗರಾಜ, ಆನಂದ್, ಜಿ.ಎಂ.ಶ್ರೀನಿವಾಸ, ಮುನಿಯಪ್ಪ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.