ADVERTISEMENT

ಗ್ರಾಮೀಣ ರಸ್ತೆಗೆ 16 ಕೋಟಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 6:55 IST
Last Updated 11 ಜೂನ್ 2011, 6:55 IST

ಮಾಲೂರು: ತಾಲ್ಲೂಕಿನಲ್ಲಿ 150 ಕಿ.ಮೀ.  ಗ್ರಾಮೀಣ ಸಂಪರ್ಕ ರಸ್ತೆಗಳನ್ನು ರೂ. 16 ಕೋಟಿ ವೆಚ್ಚದಲ್ಲಿ ಹಾಗೂ ಕೈಗಾ ರಿಕಾ ಪ್ರಾಂಗಣದಿಂದ ಚನ್ನಸಂದ್ರ ಮಾರ್ಗ ವಾಗಿ ಐಟಿಪಿಎಲ್‌ವರೆಗೂ ರೂ.40 ಕೋಟಿ ವೆಚ್ಚದಲ್ಲಿ ದ್ವಿಪಥ ರಸ್ತೆ ಅಭಿ ವೃದ್ಧಿ ಪಡಿಸಲಾಗುತ್ತದೆ ಎಂದು ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ  ತಿಳಿಸಿದರು.

ಅವರು ತಾಲ್ಲೂಕಿನ ನೊಸಗೆರೆ ಗ್ರಾ.ಪಂನಲ್ಲಿ ಗುರುವಾರ ಹಮ್ಮಿ ಕೊಂಡಿದ್ದ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ  ಹಲವು ಕಾರ್ಯ ಕ್ರಮ ಹಮ್ಮಿಕೊಂಡಿದೆ.  ಹದಗೆಟ್ಟಿರುವ ರಸ್ತೆ ಅಭಿವೃದ್ಧಿಗೆ  ರೂ.34 ಕೋಟಿ ಯೋಜನೆ  ರೂಪಿಸಿ ಸರ್ಕಾರಕ್ಕೆ ಪ್ರಸ್ತಾ ವನೆ ಸಲ್ಲಿಸಲಾಗಿತ್ತು.

ಮೊದಲನೇ ಹಂತದಲ್ಲಿ ರೂ.16 ಕೋಟಿ ಬಿಡು ಗಡೆಯಾಗಿದ್ದು, ಹೊಸಕೋಟೆಯಿಂದ ಆಂಧ್ರದ ಗಡಿ  ವಿ.ಕೋಟೆಯವರೆಗೂ, ಟೇಕಲ್ ಮಾರ್ಗವಾಗಿ ಬಂಗಾರಪೇಟೆ ವರೆಗೂ, ಕೋಲಾರದಿಂದ ಮಾಸ್ತಿಗೆ ತೊರಲಕ್ಕಿ ಮುಖಾಂತರ ಹಾಗೂ ಪಟ್ಟಣದಿಂದ ಕಾಡದೇನಹಳ್ಳಿ ಮಾರ್ಗವಾಗಿ ಪಿಚ್ಚಗುಂಟ್ರಹಳ್ಳಿ ಗ್ರಾಮದ ವರೆಗೂ ರಸ್ತೆ ಡಾಂಬರೀಕರಣ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ನಾರಾಯಣಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ತಾಲ್ಲೂಕಿನ 150 ಮಂದಿ ಅರ್ಚಕರಿಗೆ ಉಚಿತ ಸೈಕಲ್ ಅನ್ನು ಜೂ.14 ರಂದು ವಿತ ರಿಸಲಾಗುವುದು. 100 ಮಂದಿ ಅಂಗ ವಿಕಲರಿಗೆ ಸೈಕಲ್ ನೀಡಲಾಗುವುದು. ನೊಸಗೆರೆ ಗ್ರಾ.ಪಂ. ವ್ಯಾಪ್ತಿಯ ಫಲಾ ನುಭವಿಗಳ ಪಟ್ಟಿ ನೀಡಿದರೆ 500 ಮನೆ ಮಂಜೂರು ಮಾಡಲಾಗುತ್ತದೆ. ವರ ಮಹಾಲಕ್ಷ್ಮಿಹಬ್ಬದ ವೇಳೆಗೆ  290 ಹಳ್ಳಿಗಳಿಗೆ ಶುದ್ಧ ನೀರು ಪೂರೈಸ ಲಾಗುವುದು ಎಂದು  ತಿಳಿಸಿದರು. 
 
ಅಧ್ಯಕ್ಷತೆಯನ್ನು ನೊಸಗೆರೆ ಗ್ರಾ.ಪಂ ಅಧ್ಯಕ್ಷ ಕೆ.ಎಂ.ಅಶೋಕ್ ಕುಮಾರ್ ವಹಿಸಿದ್ದರು.
ತಾ.ಪಂ. ಅಧ್ಯಕ್ಷ ಆರ್.ಆನಂದ್, ಇಒ ರಾಮಕೃಷ್ಣಪ್ಪ, ಜಿ.ಪಂ.ಸದಸ್ಯೆ  ಯಲ್ಲಮ್ಮ, ತಾ.ಪಂ. ಸದಸ್ಯ ಪುಟ್ಟ ಸ್ವಾಮಿ, ನೊಸಗೆರೆ ಗ್ರಾ.ಪಂ. ಉಪಾಧ್ಯಕ್ಷೆ ಪಾರ್ವತಮ್ಮ ಚಿನ್ನಸ್ವಾಮಿಗೌಡ, ಮಾಜಿ ಅಧ್ಯಕ್ಷರಾದ ಬಿ.ಎನ್. ಮ್ಲ್ಲಲಿ ಕಾರ್ಜು ನಯ್ಯ, ಪಿ.ಎಂ.ವೆಂಕಟೇಶ್, ಸದಸ್ಯರಾದ ವೆಂಕಟೇಶಪ್ಪ, ವೆಂಕಟರೆಡ್ಡಿ, ಸಿ.ಎಂ. ನಾರಾಯಣಸ್ವಾಮಿ,ನಾಗರಾಜ್,ಕೃಷ್ಣ ಪ್ಪ,ಲಕ್ಷ್ಮಮ್ಮ ಶಶಿಕಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT