ADVERTISEMENT

ತನಿಖಾ ಠಾಣೆ ನಿದ್ರಾವಸ್ಥೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 2:30 IST
Last Updated 22 ಮಾರ್ಚ್ 2012, 2:30 IST

ಮುಳಬಾಗಲು: ತಾಲ್ಲೂಕಿನಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆ ತಡೆಯಲು ಈಚೆಗೆ ಪಟ್ಟಣದ ನರಸಿಂಹತೀರ್ಥದಲ್ಲಿ ಮರಳು ಸಾಗಾಣಿಕಾ ತನಿಖಾ ಠಾಣೆ ಸ್ಥಾಪಿಸಲಾಗಿದೆ. ಆದರೆ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಮೀನಾಮೇಷ ಎಣಿಸಿದ್ದರಿಂದ ಠಾಣೆ ಪ್ರಾರಂಭವಾಗದೇ ಉಳಿದಿತ್ತು.

ಈಚೆಗೆ ದಿನದ ಎರಡೂ ಪಾಳಿಗೆ 3 ಜನ ಗುತ್ತಿಗೆ ಸಿಬ್ಬಂದಿಯನ್ನು ನಿಯೋಜಿಸಿದೆ. ಈ ಸಿಬ್ಬಂದಿಯೊಂದಿಗೆ ಕಂದಾಯ. ಪೊಲೀಸ್ ಇಲಾಖೆಗಳಿಂದ ತಲಾ ಒಬ್ಬ ಸಿಬ್ಬಂದಿ ನಿಯೋಜಿಸಿ ಮರಳು ಲಾರಿ ಪರಿಶೀಲಿಸುವ ಕೆಲಸ ನೀಡಿದೆ.
 
ನಿಯೋಜಿತ ಸಿಬ್ಬಂದಿ ಪರ್ಮಿಟ್ ಇರುವ ಲಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ಆದರೆ ಅದಕ್ಕಿಂತ ಎರಡರಷ್ಟು ಲಾರಿಗಳು ಯಾವುದೇ ಆದೇಶವಿಲ್ಲದೆ ಆಕ್ರಮವಾಗಿ ಮರಳು ಸಾಗಣಿಕೆ ಮಾಡುತ್ತಿವೆ. ಇಂತಹ ದಂಧೆಯನ್ನು ತಡೆಯುವಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.