ADVERTISEMENT

ಬ್ರೆಕ್ ಜಾಮ್: ನಿಂತ ರೈಲು

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 8:06 IST
Last Updated 14 ಜುಲೈ 2013, 8:06 IST

ಬಂಗಾರಪೇಟೆ: ಪಟ್ಟಣದ ರೈಲು ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಕೊಚ್ಚುವೇಲಿಗೆ ಹೊರಟಿದ್ದ ಎಕ್ಸ್‌ಪ್ರೆಸ್ ರೈಲಿನ ಎಸ್-14ರ ಬೋಗಿಯ ಚಕ್ರದ ಬ್ರೇಕ್ ಜಾಮ್ ಆಗಿದ್ದರಿಂದ ಒಂದು ಗಂಟೆಗೂ ಹೆಚ್ಚು ಸಮಯ ರೈಲು ನಿಲ್ಲಬೇಕಾಯಿತು.

ವಿವರಣೆ: ರೈಲು ಪಟ್ಟಣದ ನಿಲ್ದಾಣ ಸಮೀಪಿಸುತ್ತಿದ್ದಂತೆ ರೈಲಿನ ಎಸ್-14ರ ಬೋಗಿಯಿಂದ ಭಾರಿ ಶಬ್ದ ಕೇಳಿಸಿದೆ. ಇದರಿಂದ ಗಾಬರಿಗೊಂಡ ರೈಲು ಸಿಬ್ಬಂದಿ ಪರಿಶೀಲಿಸಿದಾಗ ಚಕ್ರದ ಬ್ರೇಕ್ ಜಾಮ್ ಆಗಿ ಗಾಲಿ ಸವೆತ ಉಂಟಾಗಿರುವುದು ಕಂಡುಬಂದಿದೆ. ಕೂಡಲೇ ಎಚ್ಚತ್ತುಕೊಂಡ ರೈಲು ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಬೋಗಿಯನ್ನು ಬೇರ್ಪಡಿಸಿದ್ದಾರೆ. ಆ ಬೋಗಿಯಲ್ಲಿದ್ದ 72 ಮಂದಿ ಪ್ರಯಾಣಿಕರನ್ನು ಇತರ ಬೋಗಿಗಳಿಗೆ ಸ್ಥಳಾಂತರಿಸಿ, ಕಳುಹಿಸಲಾಗಿದೆ.

ತಡ: ಘಟನೆ ಹಿನ್ನೆಲೆಯಲ್ಲಿ ಕೊಚುವೇಲಿಗೆ ತೆರಳಬೇಕಿದ್ದ ರೈಲು ಒಂದು ಘಂಟೆ ತಡವಾಗಿ ಚಲಿಸಿದೆ ಎಂದು ಪಟ್ಟಣದ ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. 

ರೈಲಿನಲ್ಲಿ ಉಂಟಾದ ಭಾರಿ ಶಬ್ದದಿಂದ ಕೆಲ ಪ್ರಯಾಣಿಕರು ಗಾಬರಿಗೊಂಡರು. ಅಲ್ಲದೆ ದೂರದ ಪಟ್ಟಣಗಳಿಗೆ ಹೋಗಬೇಕಾದ ಪ್ರಯಾಣಿಕರು ಪರದಾಡುವಂತಾಯಿತು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.