ADVERTISEMENT

ಭೀಮಜ್ಯೋತಿಗೆ ಗಣ್ಯರ ಸ್ವಾಗತ, ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 8:44 IST
Last Updated 6 ಡಿಸೆಂಬರ್ 2017, 8:44 IST

ಶ್ರೀನಿವಾಸಪುರ: ಪಟ್ಟಣಕ್ಕೆ ಸೋಮವಾರ ಬಂದ ಭೀಮ ಜ್ಯೋತಿಯನ್ನು ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಸ್ವಾಗತಿಸಿದರು. ಪಟ್ಟಣದ ಹೊರ ವಲಯದ ರೈಲು ನಿಲ್ದಾಣದ ಸಮೀಪ ಸ್ವಾಗತಿಸಿದ ಬಳಿಕ ಜ್ಯೋತಿಯನ್ನು ಪಟ್ಟಣದ ಎಂಜಿ ರಸ್ತೆ ಮೂಲಕ ಮಿನಿ ವಿಧಾನಸೌಧದ ಎದುರಿನ ಅಂಬೇಡ್ಕರ್‌ ಉದ್ಯಾನದವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಉದ್ಯಾನದಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಗೆ ತಹಶೀಲ್ದಾರ್ ವೈ.ರವಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಮಾಲಾರ್ಪಣೆ ಮಾಡಿದರು. ದಲಿತ ಮುಖಂಡ ವರ್ತನಹಳ್ಳಿ ವೆಂಕಟೇಶ್‌ ಮಾತನಾಡಿ, ‘ಮಹಾ ಮಾನವತಾವಾದಿ ಡಾ.ಬಿ.ಆರ್‌.ಅಂಬೇಡ್ಕರ್‌ ಶ್ರೇಷ್ಠವಾದ ಸಂವಿಧಾನ ನೀಡುವುದರ ಮೂಲಕ ದೇಶದ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ’ ಎಂದು ಅವರು ಹೇಳಿದರು.

ಅಂಬೇಡ್ಕರ್‌ ಅವರ 61ನೇ ಪರಿನಿರ್ವಹಣಾ ದಿನಾಚರಣೆ ಅಂಗವಾಗಿ ಆಗಮಿಸಿರುವ ಭೀಮಜ್ಯೋತಿಯನ್ನು ಸಚಿವ ಕೆ.ಅರ್‌.ರಮೇಶ್‌ ಕುಮಾರ್‌, ಜೆಡಿಎಸ್‌ ಮುಖಂಡ ಜಿ.ಕೆ.ವೆಂಕಟಶಿವಾರೆಡ್ಡಿ ಹೃದಯ ಪೂರ್ವಕವಾಗಿ ಸ್ವಾಗತಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವನಿಕರಿಗೆ ದಲಿತ ಸಮಘಟನೆಗಳ ಒಕ್ಕೂಟದಿಂದ ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ಹೇಳಿದರು.

ADVERTISEMENT

ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌, ರಾಮಮೂರ್ತಿ, ಈರಪ್ಪ, ಎನ್‌.ರಾಮಕೃಷ್ಣ, ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಎಂ.ವೆಂಕಟರಾಮಪ್ಪ, ಸಬ್‌ ಇನ್‌ಸ್ಪೆಕ್ಟರ್‌ ಬಿ.ಆರ್.ಜಗದೀಶ್‌, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜಣ್ಣ, ಎಅರ್‌ಇಜಿ ಸಹಾಯಕ ನಿರ್ದೇಶಕ ರವಿಚಂದ್ರ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಪ್ರಾಂಶುಪಾಲ ಆರ್‌.ರವಿಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.