ADVERTISEMENT

ಮಳೆ ನೀರು ಸಂಗ್ರಹಿಸಿ, ಪರಿಸರ ಉಳಿಸಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 8:40 IST
Last Updated 25 ಮಾರ್ಚ್ 2012, 8:40 IST

ಮಾಲೂರು: ಮಳೆ ನೀರು ಸಂಗ್ರಹಿಸಿರುವುದರಿಂದ ನಮ್ಮ ಸುತ್ತಲಿನ ಉಷ್ಣಾಂಶವನ್ನು ಕಡಿಮೆ ಮಾಡಬಹುದು ಎಂದು ಜಿಲ್ಲಾ ಅರಣ್ಯಾಧಿಕಾರಿ ಮುನೇಗೌಡ ಸಲಹೆ ನೀಡಿದರು.
 
ಪಟ್ಟಣದಲ್ಲಿ ಬುಧವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ವಿಶ್ವ ಅರಣ್ಯ ಹಾಗೂ ವಿಶ್ವ ಜಲ ದಿನ ಅಂಗವಾಗಿ `ಮಳೆ ನೀರು ಕೊಯ್ಲು~ ಕುರಿತು  ಕೈಗಾರಿಕಾ ಉದ್ದಿಮೆದಾರರಿಗೆ ತರಬೇತಿ ಕಾರ್ಯಾ ಗಾರದಲ್ಲಿ ಮಾತನಾಡಿದರು.

ಗ್ರಾಮೀಣ ಪ್ರದೇಶದ್ಲ್ಲಲೂ ಬಿಸಿಲಿನ ಬೆಗೆ ಹೆಚ್ಚಾಗುತ್ತಿದೆ. ಅರಣ್ಯ ನಾಶ ಹಾಗೂ ಕಾರ್ಖಾನೆಗಳಿಂದ ಬಿಡುಗಡೆಯಾಗುವ ಮಾಲಿನ್ಯದಿಂದ ಪರಿಸರ ಸಂಪೂರ್ಣವಾಗಿ ಹದಗೆಡಲು ಕಾರಣವಾಗಿದೆ ಎಂದು ವಿವರಿಸಿದರು.

ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿ ಬಿ.ಎನ್. ರಮೇಶ್ ಕುಮಾರ್ ಮಾತನಾಡಿ, ಬೇಸಿಗೆಯ ಅವಧಿಯಲ್ಲಿ ನೀರನ್ನು ಮಿತವಾಗಿ ಬಳಸಬೇಕು. ಪ್ರತಿಯೊಂದು ಕುಟುಂಬ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಾಗ ಮಾತ್ರ ನೀರಿನ ಸಮಸ್ಯೆ ಬಗೆ ಹರಿಯಲು ಸಾಧ್ಯ ಎಂದು ಹೇಳಿದರು.

ಮಳೆ ನೀರು ಸಂಗ್ರಹ ತಜ್ಞ ಅಯ್ಯಪ್ಪ ಮಸಗಿ, ಜಿಲ್ಲಾ ಪರಿಸರ ಅಧಿಕಾರಿ ವಿಜಿ ಕಾರ್ತೀಕೇಯನ್, ಕ್ಲೋರೈಡ್ ಅಲಾಯ್ಸನ ಸಿಇಒ ಸರೇಂದ್ರ ಜೋಸೆಫ್, ಕರ್ನಾಟಕ ಕೈಗಾರಿಕ ಅಭಿವೃದ್ಧಿ ಮಂಡಳಿ ಅಧಿಕಾರಿ ರಾಮಕೃಷ್ಣ ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.