ADVERTISEMENT

ಸಾಮಾಜಿಕ ಜವಾಬ್ದಾರಿ ಅರಿಯಿರಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 7:05 IST
Last Updated 23 ಸೆಪ್ಟೆಂಬರ್ 2011, 7:05 IST

ಕೆಜಿಎಫ್: ಪ್ರತಿಯೊಬ್ಬರು ಸಾಮಾಜಿಕ ಜವಾಬ್ದಾರಿ ಅರಿಯಬೇಕಾಗಿದೆ. ಈ ನಿಟ್ಟಿನಲ್ಲಿ ಎನ್‌ಎಸ್‌ಎಸ್ ಅಂತಹ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಸಾಮಾಜಿಕ ಕರ್ತವ್ಯವನ್ನು ಅರಿತುಕೊಳ್ಳುವುದು ಸಾಧ್ಯವಿದೆ~ ಎಂದು  ಬೂದಿಕೋಟೆ ಸರ್ಕಾರಿ ಕಿರಿಯ ಕಾಲೇಜು ಉಪನ್ಯಾಸಕ ಜನಾರ್ದನ ಹೇಳಿದರು.

ರಾಬರ್ಟ್‌ಸನ್‌ಪೇಟೆಯ ಬಾಲಕರ  ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆರಂಭವಾದ ನೂತನ ಎಸ್‌ಎಸ್‌ಎಸ್ ಘಟಕ ಉದ್ಘಾಟಿಸಿ ಮಾತನಾಡಿದರು.

`ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕಾದರೆ ಕೆಲವು ಜವಾಬ್ದಾರಿ ಹೊರಬೇಕು. ಸಾಮಾಜಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರೆ ನಾಯಕತ್ವ ಗುಣ ಸಹಜವಾಗಿಯೇ ಬರುತ್ತದೆ~ ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಸುಬ್ರಹ್ಮಣ್ಯ ಆಚಾರಿ ಮಾತನಾಡಿ, ಪರೀಕ್ಷೆಯಲ್ಲಿ ಅಂಕ ಗಳಿಕೆ ಮಾತ್ರ ವಿದ್ಯಾರ್ಥಿಗಳಿಗೆ ಮಾನದಂಡವಾಗಬಾರದು.  ಜೀವನದಲ್ಲಿ ಮೌಲ್ಯಗಳನ್ನು ಸಹ ಬೆಳೆಸಿಕೊಳ್ಳಬೇಕು ಎಂದರು.
ಎನ್‌ಎಸ್‌ಎಸ್ ಅಧಿಕಾರಿ ಪ್ರಭಾಕರರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

 ಮಂಜುನಾಥ ರಾವ್, ಉಪನ್ಯಾಸಕರಾದ ಧನಲಕ್ಷ್ಮಿ, ಚಂದ್ರಪ್ಪ, ರಾಮಚಂದ್ರ ಹಾಜರಿದ್ದರು.
 ಹರಿನಾಥ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.