ADVERTISEMENT

370ನೇ ವಿಧಿ ರದ್ದು ಐತಿಹಾಸಿಕ ತೀರ್ಮಾನ: ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್

ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 19:30 IST
Last Updated 15 ಸೆಪ್ಟೆಂಬರ್ 2019, 19:30 IST
ಕೋಲಾರದಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಆಯೋಜಿಸಿದ್ದ ಒಂದು ದೇಶ ಒಂದು ಸಂವಿಧಾನ ವಿಧಿ 370 ಮತ್ತು 35ಎ ವಿಶೇಷ ಸ್ಥಾನಮಾನ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಹರ್ಷವರ್ಧನ್ ಮಾತನಾಡಿದರು.
ಕೋಲಾರದಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಆಯೋಜಿಸಿದ್ದ ಒಂದು ದೇಶ ಒಂದು ಸಂವಿಧಾನ ವಿಧಿ 370 ಮತ್ತು 35ಎ ವಿಶೇಷ ಸ್ಥಾನಮಾನ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಹರ್ಷವರ್ಧನ್ ಮಾತನಾಡಿದರು.   

ಕೋಲಾರ: ‘ಕೇಂದ್ರ ಸರ್ಕಾರ 370ನೇ ವಿಧಿಯನ್ನು ರದ್ದುಗೊಳಿಸಿರುವುದರಿಂದ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಕಡಿಮೆಯಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ’ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಹರ್ಷವರ್ಧನ್ ತಿಳಿಸಿದರು.

ನಗರದಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಆಯೋಜಿಸಿದ್ದ ಒಂದು ದೇಶ ಒಂದು ಸಂವಿಧಾನ ವಿಧಿ 370 ಮತ್ತು 35ಎ ವಿಶೇಷ ಸ್ಥಾನಮಾನ ಕುರಿತು ನಡೆದ ವಿಚಾರದಲ್ಲಿ ಮಾತನಾಡಿ, ‘ಸಂವಿಧಾನ ತಜ್ಞ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಿಗೆ ವಿಶೇಷ ಸ್ಥಾನ ಮಾನ ಕೊಡುವುದಕ್ಕಾಗಿ 370 ವಿಧಿ ತಂದಿರುವುದನ್ನು ಆರಂಭದಲ್ಲಿಯೇ ವಿರೋಧಿಸಿದ್ದರು’ ಎಂದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ದೇಶದಲ್ಲಿ ಒಂದು ಕಾನೂನು ಇರಲಿಲ್ಲ. ಇಡೀ ದೇಶಕ್ಕೆ ಒಂದು ಕಾನೂನು ಇದ್ದರೆ ಜಮ್ಮು ಕಾಶ್ಮೀರ ರಾಜ್ಯಕ್ಕೆ ಮಾತ್ರ 370 ವಿಧಿ ಅನುಸಾರ ವಿಶೇಷ ಕಾನೂನು ಇತ್ತು, ಇದನ್ನು ಮನಗಂಡ ಪ್ರಧಾನಿ ನರೇಂದ್ರ ನರೇಂದ್ರಮೋದಿ 370ನೇ ವಿಧಿ ರದ್ದುಗೊಳಿಸಿ ದೇಶದಲ್ಲೆಲ್ಲಾ ಒಂದೇ ಕಾನೂನು ತಂದರು’ ಎಂದು ವಿವರಿಸಿದರು.

ADVERTISEMENT

‘370ನೇ ವಿಧಿಯನ್ನು ರದ್ದುಗೊಳಿಸುತ್ತಿದ್ದಂತೆ ಜಮ್ಮು ಕಾಶ್ಮೀರದಲ್ಲಿದ್ದ ಭಯೋತ್ಪದಕರು, ಉಗ್ರಗಾಮಿಗಳು ಜಾಗ ಖಾಲಿ ಮಾಡಿದರು. ಅಲ್ಲಿನ ವಾತಾವರಣದ ಸಹ ಬದಲಾಗುತ್ತಿದ್ದು, ಪ್ರತಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸಹಕಾರ ಸಹಕಾರ ನೀಡುತ್ತಿದೆ’ ಎಂದು ಹೇಳಿದರು.

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮಗಳ ಸಾಧನೆಯಿಂದ ದೇಶ ವಿಶ್ವಮಟ್ಟಕ್ಕೆ ಗುರು ಸ್ಥಾನದಲ್ಲಿದೆ’ ಎಂದು ಅಭಿಪ್ರಾಯಪಟ್ಟರು.

‘ದೇಶಗಳಲ್ಲಿ ಹಿಂದಿನಿಂದಲೂ ಜಾತಿ, ಧರ್ಮ ಆಧಾರದ ಮೇಲೆ ಚುನಾವಣೆ ನಡೆಯುತ್ತಿದ್ದವು, ಇದರ ವಿರುದ್ಧ ಹೋರಾಟ ನಡೆದಸಿದವರ ಸಂಖ್ಯೆಯೂ ತೀರ ಕಡಿಮೆಯಿತ್ತು. ಇದಕ್ಕು ಮೋದಿ ಅವರೇ ಅಂತ್ಯ ಹಾಡಲಿದ್ದಾರೆ’ ಎಂದರು.

‘ದೇಶದಲ್ಲಿ 370ನೇ ವಿಧಿ ರದ್ದು ಮಾಡಲು ಮಹತ್ತರ ತೀರ್ಮಾನಕ್ಕೆ ಬಹುತೇಕ ಸಂಸದರು ಬೆಂಬಲ ಸೂಚಿಸಿದ್ದಾರೆ, ಅದೇ ರೀತಿ ರಾಜ್ಯ ಸಭೆಯಲ್ಲೂ ಬೆಂಬಲ ವ್ಯಕ್ತವಾಗಿದೆ. ಮೋದಿ ಪ್ರಧಾನಿಯಾದ ಮೇಲೆ ಉಗ್ರಗಾಮಿಗಳು ಹೊರಗೆ ಬರಲು ಹೆದರುತ್ತಿದ್ದಾರೆ’ ಎಂದು ತಿಳಿಸಿದರು.

‘ಜಮ್ಮು ಕಾಶ್ಮೀರವನ್ನು ಉಗ್ರಗಾಮಿಗಳ ಉತ್ಪಾದನಾ ಕೇಂದ್ರವನ್ನಾಗಿಸಿಕೊಂಡಿದ್ದ ಪಾಕಿಸ್ತಾನ ದೇಶದವರಿಗೆ ಇದೊಂದು ದೊಡ್ಡ ಹಿನ್ನೆಡೆ ಆಗಿದೆ. ಈ ವಿಧಿಯ ಬಗ್ಗೆ ಸಾರ್ವಜನಿಕರಿಗೆ ಅರಿವು ಸಾರ್ಮೂಡಿಸಬೇಕಾದ ಕರ್ತಯವ್ಯ ಕಾರ್ಯಕರ್ತರ ಮೇಲಿದೆ’ ಎಂದು ಸೂಚಿಸಿದರು.

ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಎನ್.ರವಿಕುಮಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಮಾಜಿ ಶಾಸಕರಾದ ವೈ.ಸಂಪಂಗಿ, ಎ.ನಾಗರಾಜು, ಬಿಜೆಪಿ ವಿಭಾಗ ಪ್ರಭಾರ ಸಚ್ಚಿದಾನಂದ ಮೂರ್ತಿ, ಮುಖಂಡ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.