ADVERTISEMENT

ಮುಳಬಾಗಿಲು | ಎರಡು ತಲೆಯ ಕರುವಿಗೆ ಜನ್ಮ ನೀಡಿದ ಸೀಮೆ ಹಸು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 15:26 IST
Last Updated 12 ಏಪ್ರಿಲ್ 2025, 15:26 IST
<div class="paragraphs"><p>ಮುಳಬಾಗಿಲು ತಾಲ್ಲೂಕಿನ ರಾಮಸಂದ್ರ ಗ್ರಾಮದಲ್ಲಿ ಜನಿಸಿರುವ ಎರಡು ತಲೆಯ ಕರು</p></div>

ಮುಳಬಾಗಿಲು ತಾಲ್ಲೂಕಿನ ರಾಮಸಂದ್ರ ಗ್ರಾಮದಲ್ಲಿ ಜನಿಸಿರುವ ಎರಡು ತಲೆಯ ಕರು

   

ಮುಳಬಾಗಿಲು: ಹಸುವೊಂದು ಎರಡು ತಲೆಗಳ ವಿಚಿತ್ರ ಕರುವಿಗೆ ಜನ್ಮ ನೀಡಿರುವ ಘಟನೆ ತಾಲ್ಲೂಕಿನ ರಾಮಸಂದ್ರ ಗ್ರಾಮದಲ್ಲಿ ಶನಿವಾರ ನಡೆದಿದೆ.

ತಾಲ್ಲೂಕಿನ ಆವಣೊ ಹೋಬಳಿಯ ರಾಮಸಂದ್ರ ಗ್ರಾಮದ ಯಲ್ಲಪ್ಪ ಎಂಬ ರೈತರಿಗೆ ಸೇರಿದ ಸೀಮೆ ಹಸು ಒಂಬತ್ತು ತಿಂಗಳು ಪೂರ್ಣಗೊಂಡ ನಂತರ ಕರುವಿಗೆ ಜನ್ಮ ನಿಡಿದೆ. ಆದರೆ ಒಂದೇ ದೇಹದ ಕರುವಿನಲ್ಲಿ ಎರಡು ತಲೆಗಳು, ಎರಡು ಬಾಯಿ, ಎರಡು ಕಿವಿಗಳು ಹಾಗೂ ನಾಲ್ಕು ಕಣ್ಣುಗಳಿಂದ ಕೂಡಿರುವುದನ್ನು ಕಂಡು ಜನ ಆಶ್ಚರ್ಯಕ್ಕೆ ಒಳಗಾಗಿದ್ದು, ಮನೆಯ ಮುಂದೆ ಕರುವನ್ನು ನೋಡಲು ಜನಸಾಗರವೇ ಬಂದು ಸೇರಿದೆ.

ADVERTISEMENT

ಮೊದಲ ಬಾರಿಗೆ ಎರಡು ತಲೆಯ ಕರುವನ್ನು ನೋಡಿದ ತಾಲ್ಲೂಕಿನ ಜನತೆ ಮೊಬೈಲುಗಳಲ್ಲಿ ಫೋಟೊ–ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಿಂದಲೂ ಜನ ಕರುವನ್ನು ನೋಡಲು ತಂಡೋಪ ತಂಡಗಳಾಗಿ ಆಗಮಿಸುತ್ತಿದ್ದಾರೆ.

ಪಶುವೈದ್ಯರು ಹಸು ಹಾಗೂ ಕರುವಿನ ಆರೋಗ್ಯವನ್ನು ತಪಾಸಣೆ ಮಾಡಿದ್ದು, ಹಸು ಹಾಗೂ ಕರು ಎರಡೂ ಆರೋಗ್ಯಕರವಾಗಿವೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.