ADVERTISEMENT

ಶ್ರೀನಿವಾಸಪುರ | ಅಪಘಾತದಲ್ಲಿ ಮಹಿಳೆ ಸಾವು, 8 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 7:44 IST
Last Updated 18 ಅಕ್ಟೋಬರ್ 2025, 7:44 IST
ಶ್ರೀನಿವಾಸಪುರ ತಾಲ್ಲೂಕಿನ ಮೀಸಗಾನಹಳ್ಳಿ ಬಳಿ ಅಪಘಾತ
ಶ್ರೀನಿವಾಸಪುರ ತಾಲ್ಲೂಕಿನ ಮೀಸಗಾನಹಳ್ಳಿ ಬಳಿ ಅಪಘಾತ   

ಶ್ರೀನಿವಾಸಪುರ: ಶ್ರೀನಿವಾಸಪುರ–ಮುಳಬಾಗಿಲು ರಸ್ತೆಯ ಮೀಸಗಾನಹಳ್ಳಿ ಗೇಟ್ ಬಳಿ ಶುಕ್ರವಾರ ಎರಡು ವಾಹನಗಳ ಮಧ್ಯೆ ಡಿಕ್ಕಿಯಾಗಿ ಮಹಿಳೆ ಮೃತಪಟ್ಟಿದ್ದಾರೆ. ಎಂಟು ಮಂದಿ ಗಾಯಗೊಂಡಿದ್ದಾರೆ.

ಯಶೋಧಮ್ಮ (50) ಮೃತ ಮಹಿಳೆ. ಶ್ರೀನಿವಾಸಪುರದಿಂದ ಮುಳಬಾಗಿಲು ಕಡೆ ಹೋಗುತ್ತಿದ್ದ ಆಟೊಗೆ ಮುಳಬಾಗಿಲಿನಿಂದ ಶ್ರೀನಿವಾಸಪುರಕ್ಕೆ ಬರುತ್ತಿದ್ದ ಕ್ಯಾಂಟರ್‌ ವಾಹನ ಡಿಕ್ಕಿ ಹೊಡೆದಿದೆ ಎಂಬುದು ಗೊತ್ತಾಗಿದೆ.

ಆಟೋದಲ್ಲಿ ಹೋಗುತ್ತಿದ್ದ ಒಂದೇ ಕುಟುಂಬದ 8 ಜನರು ಗಂಭೀರ ಗಾಯಗೊಂಡಿದ್ದು, ಕೆಲವರನ್ನು ಕೋಲಾರ ಎಸ್‍ಎನ್‍ಆರ್ ಆಸ್ಪತ್ರೆಗೆ, ಇನ್ನು ಕೆಲವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.