ADVERTISEMENT

‘ಸಂಘಟಿತ ಹೋರಾಟ ಅಗತ್ಯ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 8:56 IST
Last Updated 20 ಸೆಪ್ಟೆಂಬರ್ 2021, 8:56 IST
ಬಂಗಾರಪೇಟೆಯಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಕಾರ್ಮಿಕ ಒಕ್ಕೂಟ ರಚನೆ ಪೂರ್ವಭಾವಿ ಸಭೆಯಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ವಿಶ್ವ ಕಾರ್ಮಿಕರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಜಿ.ಕೆ.ರಾಜೇಂದ್ರಗೌಡ, ಸಮಾಜಿಕ ಕಾರ್ಯಕರ್ತ ರಮಾನಂದ ಸಾಗರ, ಒಕ್ಕೂಟದ ಪಿಆರ್‌ಒ ಜಿ.ಎಸ್.ಉದಯಕುಮಾರ್,  ನಿರ್ದೇಶಕ  ಎಂ.ಜಿ.ಪಾಟೀಲ್, ಪ್ರಧಾನ ಕಾರ್ಯದರ್ಶಿ ಎಸ್.ಕುಮಾರ್, ತಾಲ್ಲೂಕು ಘಟಕ ಅಧ್ಯಕ್ಷ ಆರ್.ವಿ.ಮುನಿರಾಜು ಇದ್ದರು 

ಬಂಗಾರಪೇಟೆ: ಸರ್ಕಾರದ ಎಲ್ಲಾ ಅನುದಾನದಲ್ಲಿ ಕಾರ್ಮಿಕರ ಪಾಲಿದೆ. ಸಂಘಟಿತ ಹೋರಾಟದ ಮೂಲಕ ಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆಯಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ವಿಪ್ರಭವನದಲ್ಲಿ ಕಾರ್ಮಿಕರು ಆಯೋಜಿಸಿದ್ದ ವಿಶ್ವ ಕಾರ್ಮಿಕ ಒಕ್ಕೂಟ ರಚನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಒಕ್ಕೂಟ ಕೇವಲ ಸಭೆ ಸಮಾರಂಭಗಳಿಗೆ ಸೀಮಿತವಾಗಬಾರದು. ಎಲ್ಲ ರೀತಿಯ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು. ಕನಿಷ್ಠ ಆರು ತಿಂಗಳಿಗೊಮ್ಮೆ ಸಭೆ ಸೇರಿ ಸಮಸ್ಯೆಗಳ ಬಗ್ಗೆ ಚರ್ಚಿಸಿ, ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಯುಪಿಎ ಸರ್ಕಾರದದಲ್ಲಿ ಮಲ್ಲಿಕಾರ್ಜುನಖರ್ಗೆ ಅವರು ಕಾರ್ಮಿಕ ಸಚಿವರಾಗಿದ್ದ ಸಂದರ್ಭ ಕಾರ್ಮಿಕರ ಕಲ್ಯಾಣಕ್ಕಾಗಿ ಹೊಸ ಕಾಯಿದೆಗಳನ್ನು ಜಾರಿಮಾಡಿದರು. ಕಾರ್ಮಿಕರ ಹಿತದೃಷ್ಟಿ ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ಹಲ ಯೋಜನೆಗಳನ್ನು ಜಾರಿಮಾಡಿದ್ದು, ಈಗಲೂ ಮುಂದುವರೆದಿದೆ
ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ವಿಶ್ವ ಕಾರ್ಮಿಕರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಜಿ.ಕೆ.ರಾಜೇಂದ್ರಗೌಡ, ಸಾಮಾಜಿಕ ಕಾರ್ಯಕರ್ತ ರಮಾನಂದ ಸಾಗರ, ಒಕ್ಕೂಟದ ಪಿಆರ್‌ಒ ಜಿ.ಎಸ್.ಉದಯಕುಮಾರ್, ನಿರ್ದೇಶಕ ಎಂ.ಜಿ.ಪಾಟೀಲ್, ಪ್ರಧಾನ ಕಾರ್ಯದರ್ಶಿ ಎಸ್.ಕುಮಾರ್, ತಾಲ್ಲೂಕು ಘಟಕ ಅಧ್ಯಕ್ಷ ಆರ್.ವಿ.ಮುನಿರಾಜು, ಉಪಾಧ್ಯಕ್ಷ ವೆಂಕಟೇಶ್, ಮಾಗೊಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಗ್ರಾ.ಪಂ.ಸದಸ್ಯ ರಾಮಮೂರ್ತಿ, ಮಹಿಳಾ ಮುಖಂಡರಾದ ಲಕ್ಷ್ಮಮ್ಮ, ಲಲಿತಮ್ಮ, ಸಾವಿತ್ರಿ ಬಾಪುಲೆ ಎಜುಕೇಶನಲ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಸಿ.ಉಷಾರಾಣಿ, ಕಾರ್ಯದರ್ಶಿ ರುಬಿಯಾ ಬಾನು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.