ಮಾಲೂರು: ಪಟ್ಟಣದಲ್ಲಿ ವಿವಿದ್ದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (ದ್ಯಾಪಸಂದ್ರ ಸೊಸೈಟಿ) 2023–24ನೇ ಸರ್ವ ಸದಸ್ಯರ ಮಹಾ ಸಭೆಯು ಮಂಗಳವಾರ ನಡೆಯಿತು.
2023–24 ನೇ ಸಾಲಿನ ವಾರ್ಷಿಕ ಮಹಾ ಸಭೆಯ ನಡವಳಿಕೆಗಳು, ಲೆಕ್ಕ ಪರಿಶೋದನಾ ವರದಿ, 2024-25ನೇ ಸಾಲಿನ ಲೆಕ್ಕ ಪರಿಶೋಧನೆಗೆ ಲೆಕ್ಕ ಪರಿಶೋಧಕರ ನೇಮಕ ಸೇರಿದಂತೆ ವಿವಿಧ ವಿಷಯಗಳನ್ನು ಸಂಘದ ಮುಖ್ಯ ನಿರ್ವಾಹಣಾಧಿಕಾರಿ ಎಂ.ಸುಧಾಕರ್ ಸಭೆಯಲ್ಲಿ ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಆರ್. ಪ್ರಬಾಕರ್, ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಗ್ರಾಮೀಣ ಕೃಷಿ ಸಹಕಾರ ಸಂಘ ನೀಡುವ ಸೌಲಭ್ಯ ಪಡೆಯಲು ಸಂಘದ ಅಧಿಕಾರಿಗಳನ್ನು ಭೇಟಿ ಮಾಡಬೇಕು. ಕೆಲವು ಮಹಿಳಾ ಸಂಘಗಳಿಂದ ಸುಮಾರು ₹26–₹27 ಲಕ್ಷ ಸಂಘಕ್ಕೆ ಬಾಕಿ ಉಳಿದುಕೊಂಡಿದೆ. ಇದರಿಂದ ಸಂಘಕ್ಕೆ ಹೊಡೆತ ಬೀಳುತ್ತದೆ ಎಂದರು.
ವಿವಿದ್ದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಉಪಾಧ್ಯಕ್ಷ ಆರ್. ನಾರಾಯಣಸ್ವಾಮಿ, ನಿದೇರ್ಶಕ ಎಂ.ಎನ್. ಕೃಷ್ಣಪ್ಪ, ಪಿ. ಸುಬ್ರಮಣಿ, ಎನ್.ವಿ. ಮುನಿರಾಜು, ಕೆ. ವೆಂಕಟೇಶ್, ಡಿ.ಕೆ. ನಾಗರಾಜ್, ವೆಂಕಟರಮಣಪ್ಪ, ಕೃಷ್ಣಪ್ಪ, ರಾಧಮ್ಮ, ಜೆ.ಪ್ರೇ ಮ, ಎಂ. ಮುನಿರಾಜು, ಮೇಲ್ವಿಚಾರಕ ವಿ. ಕೃಷ್ಣಪ್ಪ, ಸಿಬ್ಬಂದಿ ಸಿ.ವಿ.ವೆಂಕಟಸ್ವಾಮಿಗೌಡ, ಮುಬಾರಕ್ ಬಾನು, ಪಿ.ವಿ. ಪ್ರವೀಣ್ ಕುಮಾರ್, ಕೆ. ಹರ್ಷಿತ, ಡಿ.ಎಂ. ಸುರೇಶ್ ಕುಮಾರ್ ಸೇರಿದಂತೆ ರೈತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.