ADVERTISEMENT

ಅಸಲಿ ಅತ್ತಿಕುಂಟೆ: ತಂಬಿಟ್ಟು ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 3:04 IST
Last Updated 8 ಏಪ್ರಿಲ್ 2022, 3:04 IST
ಮುಳಬಾಗಿಲು ತಾಲ್ಲೂಕಿನ ಅಸಲಿ ಅತ್ತಿಕುಂಟೆ ಗ್ರಾಮಸ್ಥರು ವಿರೂಪಾಕ್ಷಿ ಗ್ರಾಮದಲ್ಲಿನ ಶ್ರೀಮಾರೆಮ್ಮ ದೇವಿ ಉಟ್ಲು ಜಾತ್ರೆ ಅಂಗವಾಗಿ ಎತ್ತಿನಬಂಡಿಗೆ ತಂಬಿಟ್ಟು ದೀಪ ಬೆಳಗಿದರು
ಮುಳಬಾಗಿಲು ತಾಲ್ಲೂಕಿನ ಅಸಲಿ ಅತ್ತಿಕುಂಟೆ ಗ್ರಾಮಸ್ಥರು ವಿರೂಪಾಕ್ಷಿ ಗ್ರಾಮದಲ್ಲಿನ ಶ್ರೀಮಾರೆಮ್ಮ ದೇವಿ ಉಟ್ಲು ಜಾತ್ರೆ ಅಂಗವಾಗಿ ಎತ್ತಿನಬಂಡಿಗೆ ತಂಬಿಟ್ಟು ದೀಪ ಬೆಳಗಿದರು   

ಮುಳಬಾಗಿಲು: ತಾಲ್ಲೂಕಿನ ಅಸಲಿ ಅತ್ತಿಕುಂಟೆ ಗ್ರಾಮಸ್ಥರು ವಿರೂಪಾಕ್ಷಿ ಗ್ರಾಮದಲ್ಲಿನ ಶ್ರೀಮಾರೆಮ್ಮ ದೇವಿ ಉಟ್ಲು ಜಾತ್ರೆ ಅಂಗವಾಗಿ ಎತ್ತಿನಬಂಡಿ ಮೂಲಕ ತಂಬಿಟ್ಟು ದೀಪ ಬೆಳಗುವ ಮೂಲಕ ಹಬ್ಬ
ಆಚರಿಸಿದರು.

ಎತ್ತಿನಬಂಡಿಗೆ ತೇರಿನ ರೀತಿಯಲ್ಲಿ ಅಲಂಕಾರ ಮಾಡಿ ಬಣ್ಣದ ಬಟ್ಟೆಗಳನ್ನು ಸುತ್ತಿದ್ದರು. ಮಾವಿನ ತೋರಣ, ಬಾಳೆ ದಿಂಡುಗಳಿಂದ ಸಿಂಗಾರ ಮಾಡಲಾಗಿತ್ತು. ಪ್ರತಿವರ್ಷ ಯುಗಾದಿ ಹಬ್ಬ ಮುಗಿದ ಒಂಬತ್ತು ದಿನಗಳ ನಂತರ ದೇವಿಗೆ ತಂಬಿಟ್ಟು ದೀಪೋತ್ಸವ ನಡೆಯುತ್ತದೆ.

ಗ್ರಾಮದಲ್ಲಿನ ಮಾರೆಮ್ಮ ದೇವಿ ಅಸಲಿ ಅತ್ತಿಕುಂಟೆ ಗ್ರಾಮಕ್ಕೆ ಸೇರಿದ ಹೆಣ್ಣುಮಗಳೆಂಬ ಭಾವನೆ ಇದೆ. ಆದ್ದರಿಂದ ಪ್ರತಿವರ್ಷ ಇಲ್ಲಿಂದ ಎತ್ತಿನಬಂಡಿಯ ತೇರಿನಲ್ಲಿ ಪಾನಕದ ಬಿಂದಿಗೆಗಳನ್ನು ಇಟ್ಟುಕೊಂಡು ತೇರಿನ ಹಿಂಭಾಗದಲ್ಲಿ ಮಹಿಳೆಯರು ತಂಬಿಟ್ಟು ದೀಪಗಳನ್ನು ಹೊತ್ತು ದೇವಾಲಯಕ್ಕೆ ಹೋಗಿ ಹರಕೆ ತೀರಿಸುವ ಸಂಪ್ರದಾಯವಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.