ADVERTISEMENT

ಬಂಗಾರಪೇಟೆ | ಮುಖ್ಯ ರಸ್ತೆ ಅಗೆತ: ಜನರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:06 IST
Last Updated 10 ಫೆಬ್ರುವರಿ 2026, 5:06 IST
ಬಂಗಾರಪೇಟೆ ತಾಲ್ಲೂಕಿನ ದಿನ್ನಕೊತ್ತೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ಮುಖ್ಯ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ನಿಯಮ ಬಾಹಿರವಾಗಿ ಅಗೆದಿರುವುದು
ಬಂಗಾರಪೇಟೆ ತಾಲ್ಲೂಕಿನ ದಿನ್ನಕೊತ್ತೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ಮುಖ್ಯ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ನಿಯಮ ಬಾಹಿರವಾಗಿ ಅಗೆದಿರುವುದು   

ಬಂಗಾರಪೇಟೆ: ತಾಲ್ಲೂಕಿನ ಕೆಸರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನ್ನಕೊತ್ತೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ಮುಖ್ಯ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ನಿಯಮ ಬಾಹಿರವಾಗಿ ಅಗೆದು ಹಾನಿ ಮಾಡಿದ್ದಾರೆ.

ತಾಲ್ಲೂಕಿನ ಕಾಮಸಮುದ್ರ ಮುಖ್ಯ ರಸ್ತೆಯನ್ನು ₹20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದೀಗ ಅಗೆಯಲಾಗಿದೆ. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮುಖ್ಯರಸ್ತೆಯಲ್ಲಿ ನವೀನ್ ಕುಮಾರ್ ಎಂಬುವರು ತಮ್ಮ ವೈಯಕ್ತಿಕ ನೀರಿನ ಸಂಪರ್ಕಕ್ಕಾಗಿ ಅನುಮತಿ ಪಡೆಯದೆ ಮೂರು ಇಂಚು ಪೈಪು ಅಳವಡಿಸಲು ರಸ್ತೆ ಅಗೆದಿದ್ದಾರೆ. ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುವ ಸಾಧ್ಯತೆ ಇದೆ. ರಾತ್ರಿ ವೇಳೆ ಗುಂಡಿ ಕಾಣಿಸದೆ ಭೀಕರ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಈ ಕುರಿತು ಕ್ರಮ ಕೈಗೊಳ್ಳಬೇಕಾದ ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಸರಿಯಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. 

ADVERTISEMENT

ಈ ಕುರಿತು ಪ್ರಶ್ನಿಸಿದವರ ಮೇಲೆ ರಸ್ತೆ ಅಗೆದ ವ್ಯಕ್ತಿಯ ವಾಗ್ವಾದ ಮತ್ತು ಜಗಳಕ್ಕೆ ಇಳಿದಿದ್ದಾರೆ. ರಸ್ತೆ ಅಗೆಯಲು ಮೌಖಿಕ ಅಥವಾ ಅನಧಿಕೃತವಾಗಿ ಪ್ರಚೋದನೆ ನೀಡಿದ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. 

ದಿನ್ನಕೊತ್ತೂರು ಬಳಿ ಅಕ್ರಮವಾಗಿ ಅಗೆದ ರಸ್ತೆಯಿಂದ ಸರಣಿ ಅಪಘಾತಗಳು ಸಂಭವಿಸುವ ಮುನ್ನವೇ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅನಾಹುತ ಸಂಭವಿಸಿದರೆ ಅದಕ್ಕೆ ಅಗೆದ ವ್ಯಕ್ತಿ ಮತ್ತು ಅಧಿಕಾರಿಗಳೇ ನೇರ ಹೊಣೆ
–ಸಂತೋಷ್ ಕುಮಾರ್, ಸ್ಥಳೀಯ ನಿವಾಸಿ
20 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆಯನ್ನು ಹಾಳಗೆಡವಿರುವುದು ಅಕ್ಷಮ್ಯ ಅಪರಾಧ. ರಸ್ತೆ ಅಗೆದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು
–ರವಿಕುಮಾರ್, ಎಇಇ ಲೋಕೋಪಯೋಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.