ADVERTISEMENT

ಬಂಗಾರಪೇಟೆ: ಪಾಳು ಬಿದ್ದಿರುವ ಪುರಸಭೆ ವಸತಿಗೃಹ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 6:12 IST
Last Updated 17 ನವೆಂಬರ್ 2025, 6:12 IST

ಬಂಗಾರಪೇಟೆ ನಗರದ ಪುರಸಭೆ ವಸತಿಗೃಹಗಳ ಸ್ಥಿತಿ

ಬಂಗಾರಪೇಟೆ ನಗರದ ಪುರಸಭೆ ವಸತಿಗೃಹಗಳ ಸ್ಥಿತಿ

ಬಂಗಾರಪೇಟೆ: ಸೂಕ್ತ ನಿರ್ವಹಣೆ ಇಲ್ಲದೆ ಪುರಸಭೆ ವಸತಿ ಗೃಹಗಳು ಪಾಳುಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ.

ADVERTISEMENT

ನಗರದ ಹೃದಯ ಭಾಗದಲ್ಲಿ ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿ ವಾಸಿಸಲು ಹನ್ನೆರಡು ವಸತಿ ಗೃಹಗಳು ನಿರ್ಮಾಣವಾಗಿದ್ದವು. ಅದರಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ವಾಸಿಸದ ಕಾರಣ ಹಲವು ವರ್ಷಗಳಿಂದ ಪಾಳುಬಿದ್ದಿವೆ. ಹಾಗಾಗಿ ಸಂಜೆಯಾಗುತ್ತಿದ್ದಂತೆ ಜನಸಂದಣಿ ಇಲ್ಲದ, ಪಾಳು ಬಿದ್ದ ಕಟ್ಟಡಗಳಲ್ಲಿ ಮದ್ಯಪಾನ, ಜೂಜು, ಸೇವನೆ ಮತ್ತು ಅಕ್ರಮ ಚಟುವಟಿಕೆ ನಡೆಸುವವರಿಗೆ ಸುರಕ್ಷಿತ ತಾಣವಾಗಿ ಬದಲಾಗಿದೆ.

ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಿರುವ ವಸತಿ ಗೃಹಗಳು, ನೌಕರರು ವಾಸವಿಲ್ಲದ ಕಾರಣ ಶಿಥಿಲಾವಸ್ಥೆ ತಲುಪಿವೆ. ಗೋಡೆಗಳ ಮೇಲೆ ಬೆಳೆದಿರುವ ಗಿಡ, ಪೊದೆಗಳು ಗೃಹಗಳನ್ನು ಆವರಿಸಿದೆ. ಕಿಟಕಿ, ಬಾಗಿಲು ಮುರಿದು ಬಿದ್ದಿವೆ. ಎಲ್ಲೆಂದರಲ್ಲಿ ಗಿಡಗಂಟಿ ಬೆಳೆದು ವಿಷ ಜಂತುಗಳ ಅವಾಸ ತಾಣವಾಗಿ ಬದಲಾಗಿದೆ.

ವಸತಿ ಗೃಹಗಳು ಭೂತ ಬಂಗಲೆಗಳಂತಾಗಿ ಸಾರ್ವಜನಿಕರು ಶೌಚಾಲಯ ಕಸ ಎಸೆಯಲು ಬಳಸುತ್ತಿದ್ದಾರೆ. ಹಾಗಾಗಿ ಪಾಳುಬಿದ್ದ ಸರ್ಕಾರಿ ಆಸ್ತಿಯನ್ನು ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಕಟ್ಟಡ ನೆಲಸಮಗೊಳಿಸಿ ಮತ್ತೆ ಅಭಿವೃದ್ಧಿಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.