ಬಂಗಾರಪೇಟೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು
ಬಂಗಾರಪೇಟೆ: ತಾಲ್ಲೂಕಿನ ಪುತ್ರಸೊಣ್ಣೇನಹಳ್ಳಿಯಲ್ಲಿ ಅರಳೀಕಾಯಿಯನ್ನು ಬಾದಾಮಿ ಎಂದು ಭಾವಿಸಿ ತಿಂದ ಏಳು ಸರ್ಕಾರಿ ಪ್ರಥಾಮಿಕ ಶಾಲೆ ಮಕ್ಕಳು ವಾಂತಿ, ಭೇದಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ.
ಅಸ್ವಸ್ಥರಾದ ಮಕ್ಕಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಸೋಮವಾರ ಮಧ್ಯಾಹ್ನ ಊಟ ಮಾಡಿದ ನಂತರ ಎಲ್ಲ ಮಕ್ಕಳು ಶಾಲೆ ಆವರಣದಲ್ಲಿ ಆಟವಾಡುತ್ತಿದ್ದರು. ಏಳು ಮಕ್ಕಳು ಶಾಲೆ ಕಾಂಪೌಂಡ್ ಪಕ್ಕದಲ್ಲಿನ ತೋಟದಲ್ಲಿ ಕಡಿದುಹಾಕಲಾಗಿದ್ದ ಗಿಡದಲ್ಲಿದ್ದ ಅರಳೀಕಾಯಿಯನ್ನು ಬಾದಾಮಿ ಎಂದು ಭಾವಿಸಿ ತಿಂದಿದ್ದಾರೆ.
ವಾಂತಿ ಮತ್ತು ಭೇದಿ ಪ್ರಾರಂಭವಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಶಾಲಾ ಶಿಕ್ಷಕಿಯೂ ಈ ಹಣನ್ನು ತಿಂದಿದ್ದಾರೆ. ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.
ಈ ಘಟನೆಯ ಮಾಹಿತಿ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಬಿಇಒ ಜಿ. ಗುರುಮೂರ್ತಿ, ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯ ಗೌಡ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸುಜಾತ, ಮಕ್ಕಳ ಆರೋಗ್ಯ ವಿಚಾರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.