ADVERTISEMENT

ಬ್ಯಾನರ್ ವಿಚಾರ: ನೌಕರರಿಗೆ ಧಮ್ಕಿ ಹಾಕಿದ್ದಕ್ಕೆ ಸಂಸದ ಖಂಡನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 7:19 IST
Last Updated 16 ಜನವರಿ 2026, 7:19 IST
   

ಕೋಲಾರ: ಬ್ಯಾನರ್ ವಿಚಾರದಲ್ಲಿ ಶಿಡ್ಲಘಟ್ಟದ ಪೌರಾಯುಕ್ತರು ಹಾಗೂ ಪೌರಕಾರ್ಮಿಕರಿಗೆ ದೂರವಾಣಿ ಮೂಲಕ ಧಮ್ಕಿ ಹಾಕಿರುವ ಕಾಂಗ್ರೆಸ್‌ ಮುಖಂಡ ರಾಜೀವ್‌ ಗೌಡ ಕ್ರಮವನ್ನು ಖಂಡಿಸುತ್ತೇನೆ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇದೆ ಎಂದು ಏನು ಬೇಕಾದರೂ ಮಾಡಬಹುದು ಎಂಬ ಅಹಂ ಸರಿ ಅಲ್ಲ ಎಂದು ಸಂಸದ ಎಂ.ಮಲ್ಲೇಶ್‌ ಬಾಬು ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರಿ ನೌಕರರು ಕಾನೂನಿನಡಿ ಕೆಲಸ ಮಾಡುತ್ತಾರೆ. ಧಮ್ಕಿ ಹಾಕಿ ಕೆಲಸ ಮಾಡಿಸಿಕೊಳ್ಳುವುದು ಸರಿ ಅಲ್ಲ. ಇದು ಸಮಾಜಕ್ಕೆ ಕೆಟ್ಟ ಸಂದೇಶ ನೀಡುವಂಥದ್ದು’ ಎಂದರು.

ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ಬಳ್ಳಾರಿ ಹಾಗೂ ಈಚೆಗೆ ಮಾಲೂರಿನಲ್ಲೂ ಬ್ಯಾನರ್‌ ಸಂಬಂಧ ಗಲಾಟೆ ಆಗಿದೆ. ರಾಜ್ಯದಲ್ಲಿ ಆಡಳಿತ ಪಕ್ಷಕ್ಕೊಂದು ಕಾನೂನು, ವಿರೋಧ ಪಕ್ಷದವರಿಗೊಂದು ಕಾನೂನು ಎಂಬಂತಾಗಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.