ADVERTISEMENT

ನೀರಿನ ತೊಟ್ಟಿಗೆ ಬಿದ್ದು ಕರಡಿ ಸಾವು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 6:41 IST
Last Updated 22 ಫೆಬ್ರುವರಿ 2026, 6:41 IST
ನಿಟ್ಟೂರು ಹೋಬಳಿ ಹರೇನಹಳ್ಳಿಯ ತೋಟದಲ್ಲಿನ ತೊಟ್ಟಿಗೆ ಬಿದ್ದು ಮೃತಪಟ್ಟ ಕರಡಿ
ನಿಟ್ಟೂರು ಹೋಬಳಿ ಹರೇನಹಳ್ಳಿಯ ತೋಟದಲ್ಲಿನ ತೊಟ್ಟಿಗೆ ಬಿದ್ದು ಮೃತಪಟ್ಟ ಕರಡಿ   

ಗುಬ್ಬಿ: ತಾಲ್ಲೂಕಿನ ಹರೇನಹಳ್ಳಿಯ ರೈತ ಜಯಣ್ಣ ಅವರ ತೋಟದಲ್ಲಿನ ತೊಟ್ಟಿಗೆ ಬಿದ್ದು ಸುಮಾರು 10 ವರ್ಷದ ಹೆಣ್ಣು ಕರಡಿ ಮೃತಪಟ್ಟಿದೆ. 

ಜಯಣ್ಣ ತೋಟಕ್ಕೆ ಹೋದಾಗ ತೊಟ್ಟಿಗೆ ಬಿದ್ದಿದ್ದ ಕರಡಿ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು, ‘ಆಹಾರವಿಲ್ಲದೆ ನಿತ್ರಾಣಗೊಂಡಿದ್ದ ಕರಡಿ ನೀರು ಕುಡಿಯಲು ಬಂದು ತೊಟ್ಟಿಗೆ ಬಿದ್ದು ಮೃತಪಟ್ಟಿದೆ’ ಎಂದು ತಿಳಿಸಿದರು.  ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.