ADVERTISEMENT

ಬೇತಮಂಗಲ | ಹೆಲ್ಮೆಟ್ ಕಡ್ಡಾಯ: ಮುಲಾಜಿಲ್ಲದೆ ದಂಡ ವಸೂಲಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 7:51 IST
Last Updated 15 ಡಿಸೆಂಬರ್ 2025, 7:51 IST
ಬೇತಮಂಗಲ ಗ್ರಾಮದ ಬಸ್ ನಿಲ್ದಾಣದ ಪೊಲೀಸ್ ಠಾಣೆ ಮುಂಭಾಗ ಪಿಎಸ್ಐ ಗುರುರಾಜ್ ಚಿಂತಕಲ್ ಅವರು ಹೆಲ್ಮೆಟ್ ಧರಿಸದೆ ಸಂಚರಿಸಿ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸಿ, ತಕ್ಷಣ ಹೆಲ್ಮೆಟ್ ಧರಿಸಿ ಸಂಚರಿಸಲು ಸೂಚಿಸಿದರು
ಬೇತಮಂಗಲ ಗ್ರಾಮದ ಬಸ್ ನಿಲ್ದಾಣದ ಪೊಲೀಸ್ ಠಾಣೆ ಮುಂಭಾಗ ಪಿಎಸ್ಐ ಗುರುರಾಜ್ ಚಿಂತಕಲ್ ಅವರು ಹೆಲ್ಮೆಟ್ ಧರಿಸದೆ ಸಂಚರಿಸಿ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸಿ, ತಕ್ಷಣ ಹೆಲ್ಮೆಟ್ ಧರಿಸಿ ಸಂಚರಿಸಲು ಸೂಚಿಸಿದರು   

ಬೇತಮಂಗಲ: ಹೆಲ್ಮೆಟ್ ಹಾಕದೆ ರಸ್ತೆಗಿಳಿದ ದ್ವಿಚಕ್ರ ವಾಹನ ಸವಾರರಿಗೆ ಬೇತಮಂಗಲ ಪೊಲೀಸರು ಚುಮುಚುಮು ಚಳಿಯಲ್ಲಿ ದಂಡದ ಬಿಸಿ ಮುಟ್ಟಿಸಿದರು.

ಪೊಲೀಸ್ ಇಲಾಖೆಯಿಂದ ವತಿಯಿಂದ ಸುಮಾರು 10-15 ದಿನಗಳಿಂದ ಹೆಲ್ಮೆಟ್ ಕಡ್ಡಾಯದ ಕುರಿತು ಜಾಗೃತಿ ಮೂಡಿಸಿ. ಡಿ.8ರಿಂದ ಹೆಲ್ಮೆಟ್ ಕಡ್ಡಾಯಗೊಳಿಸಿದ್ದರು. ಆದರೂ ನಿರ್ಲಕ್ಷ್ಯ ತೋರುವವರಿಗೆ ದಂಡ ವಿಧಿಸಲಾಗಿದೆ.

ಬೇತಮಂಗಲ ಪೊಲೀಸ್ ಠಾಣೆ ಪಿಎಸ್ಐ ಗುರುರಾಜ್ ಚಿಂತಕಲ್ ನೇತೃತ್ವದಲ್ಲಿ ಬೀದಿಗಿಳಿದ ಪೊಲೀಸರ ತಂಡವು ಯಾವುದೇ ಪಕ್ಷದ ನಾಯಕರು, ಪೊಲೀಸರು, ಮಾಧ್ಯಮದವರು, ಅಧಿಕಾರಿಗಳು ಯಾರಿಗೂ ಮುಲಾಜಿಲ್ಲದೆ ದಂಡ ವಿಧಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.