ADVERTISEMENT

ಬೇತಮಂಗಲ: ಬೀದಿ ನಾಯಿಗಳ ದಾಳಿ– 40ಕ್ಕೂ ಹೆಚ್ಚು ಕುರಿ ಬಲಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 2:59 IST
Last Updated 28 ಫೆಬ್ರುವರಿ 2026, 2:59 IST
ಬೇತಮಂಗಲ ಸಮೀಪದ ಕಂಗಾಂಡ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಸಂದ್ರ ಗ್ರಾಮದ ಶೆಡ್‌ನಲ್ಲಿ ಬೀದಿ ನಾಯಿ ದಾಳಿಗೆ ಬಲಿಯಾಗಿರುವ ಕುರಿಗಳು
ಬೇತಮಂಗಲ ಸಮೀಪದ ಕಂಗಾಂಡ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಸಂದ್ರ ಗ್ರಾಮದ ಶೆಡ್‌ನಲ್ಲಿ ಬೀದಿ ನಾಯಿ ದಾಳಿಗೆ ಬಲಿಯಾಗಿರುವ ಕುರಿಗಳು   

ಬೇತಮಂಗಲ: ಸಮೀಪದ ವೀರಸಂದ್ರ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ 40ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.

ವೀರಸಂದ್ರದ ಕಸ್ತೂರಮ್ಮ ಮತ್ತು ಕೃಷ್ಣಪ್ಪ ಎಂಬುವವರ ಕುರಿಗಳು. ಶೆಡ್‌ನಲ್ಲಿ 80 ಕುರಿಗಳನ್ನು ಹಾಕಿ ವೃದ್ಧ ದಂಪತಿ ಮಲಗಿದ್ದಾರೆ. ಆದರೆ, ಗುರುವಾರ ರಾತ್ರಿ ಬೀದಿ ನಾಯಿಗಳ ಗುಂಪು ಶೆಡ್ ಮೇಲೆ ದಾಳಿ ನಡೆಸಿದ್ದು, 40ಕ್ಕೂ ಹೆಚ್ಚು ಕುರಿಗಳು ಸಾಪನ್ನಪ್ಪಿವೆ.

ಕುರಿ ಸಾಕಾಣಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ವೃದ್ಧ ದಂಪತಿಗೆ ₹4 ಲಕ್ಷ ಮೌಲ್ಯದ ನಷ್ಟವುಂಟಾಗಿದೆ. ಹಾಗಾಗಿ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ADVERTISEMENT

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಮಪ್ಪ, ಗ್ರಾಮಸ್ಥರಾದ ಶ್ರೀನಿವಾಸ್ ರೆಡ್ಡಿ, ವೆಂಕಟೇಶ್, ಶ್ರೀನಿವಾಸ್, ರಾಜಪ್ಪ, ಬೀರಿ ಗೌಡ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.