
ಪ್ರಜಾವಾಣಿ ವಾರ್ತೆ
ಕೋಲಾರ: ‘ಚುನಾವಣೆ ಹೊಸ್ತಿಲಲ್ಲಿ ಇದ್ದಾಗ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಮಹಿಳೆಯರ ಖಾತೆಗೆ ₹10 ಸಾವಿರ ವರ್ಗಾಯಿಸಿತು. ಇದು ಕಾನೂನು ಬಾಹಿರ. ಇದೇ ಅನುಕೂಲ ಮಾಡಿಕೊಟ್ಟಿತು ಎಂದು ಸಚಿವ ಕೆ.ಎಚ್.ಮುನಿಯಪ್ಪ ವಿಶ್ಲೇಷಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ‘ನಾವು 2023ರಲ್ಲಿ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಭರವಸೆ ನೀಡಿದ್ದೆವು. ಆದರೆ, ಬಿಹಾರದಲ್ಲಿ ಗೆಲ್ಲುವ ಮೊದಲೇ ಮಹಿಳೆಯರ ಖಾತೆಗೆ ಹಣ ಹಾಕಿದ್ದು ಸರಿ ಅಲ್ಲ. ಅದು ಚುನಾವಣಾ ಆಮಿಷ’ ಎಂದು ಟೀಕಿಸಿದರು.