ADVERTISEMENT

ಯತ್ನಾಳ ಹಿಂದೂ ಹುಲಿ ಅಲ್ಲ, ಇಲಿ: ಎಂ.ಪಿ.ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2024, 12:32 IST
Last Updated 29 ನವೆಂಬರ್ 2024, 12:32 IST
<div class="paragraphs"><p>ಮುಳಬಾಗಿಲು&nbsp;ತಾಲ್ಲೂಕಿನ ಕುರುಡುಮಲೆ ಗಣೇಶನಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಹೋರಾಟಕ್ಕೆ ಚಾಲನೆ ನೀಡಿದ&nbsp;ಎಂ.ಪಿ.ರೇಣುಕಾಚಾರ್ಯ.&nbsp;</p></div>

ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಗಣೇಶನಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಹೋರಾಟಕ್ಕೆ ಚಾಲನೆ ನೀಡಿದ ಎಂ.ಪಿ.ರೇಣುಕಾಚಾರ್ಯ. 

   

ಮುಳಬಾಗಿಲು (ಕೋಲಾರ): ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ತಾನು ಹಿಂದೂ ಹುಲಿ ಎಂಬುದಾಗಿ ಸ್ವಯಂಘೋಷಣೆ ಮಾಡಿಕೊಂಡಿದ್ದಾನೆ. ಆತ ಹಿಂದೂ ಹುಲಿ ಅಲ್ಲ; ಇಲಿ. ಮುಖವಾಡ ಹಾಕಿಕೊಂಡಿರುವ ಗೋಮುಖ ವ್ಯಾಘ್ರ’ ಎಂದು ಮಾಜಿ ಸಚಿವ ಹಾಗೂ ವಿಜಯೇಂದ್ರ ಬಣದ ಮುಖಂಡ ಎಂ.ಪಿ.ರೇಣುಕಾಚಾರ್ಯ ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಕುರುಡುಮಲೆ ಗಣೇಶನಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಇಂಥ ವ್ಯಕ್ತಿಗಳಿಂದ ಖಂಡಿತ ಯಾವುದೇ ಪಕ್ಷ ಉಳಿಯಲ್ಲ. ಈ ಸ್ವಯಂ ಘೋಷಿತ ಹಿಂದೂ ಹುಲಿಯು ಇಫ್ತಿಯಾರ್‌ ಕೂಡ ಮಾಡಿ ಟಿಪ್ಪು ಖಡ್ಗ ಹಿಡಿದುಕೊಂಡು ಓಡಾಡಿದ್ದ. ಆತನಿಗೆ ನಾಚಿಕೆ, ಮಾನ ಮರ್ಯಾದೆ ಇಲ್ಲ. ಇನ್ಮುಂದೆ ಬಾಯಿ ಬಿಚ್ಚಿದರೆ ಹುಷಾರ್‌. ನಾನೂ ಹಳ್ಳಿ ಹೈದ, ನಾನೂ ನಾಟಿ. ಹಗುರ ಮಾತು ಮುಂದುವರಿಸಿದರೆ ಸುಮ್ಮನೇ ಕೇಳಿಸಿಕೊಂಡು ಕೂರುವ ವ್ಯಕ್ತಿ ನಾನಲ್ಲ ' ಎಂದು ಎಚ್ಚರಿಕೆ ನೀಡಿದರು.

ADVERTISEMENT

'ಸ್ವಯಂ ಘೋಷಿತ ಹಿಂದೂ ಹುಲಿಗೆ ಯಾವ ರಾಷ್ಟ್ರೀಯ ನಾಯಕರು ಪ್ರವಾಸ ಮಾಡಲು ಹೇಳಿದ್ದಾರೆ? ಯಾರು ವಿಜಯೇಂದ್ರ ವಿರುದ್ಧ ಹೋರಾಟ ಮಾಡಲು ಹೇಳಿದ್ದಾರೆ’ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ಯತ್ನಾಳ ಹಾಗೂ ಅವರ ತಂಡ ಬಿಜೆಪಿ ಒಳಗಿರುವ ದುಷ್ಟ ಶಕ್ತಿ. ಆ ದುಷ್ಟ ಶಕ್ತಿ ವಿರುದ್ಧ ಹೋರಾಟ‌ ಆರಂಭಿಸಲು ವಿಘ್ನೇಶ್ವರನ ಮೊದಲ ಆಶೀರ್ವಾದ ಪಡೆದುಕೊಂಡಿದ್ದೇವೆ’ ಎಂದರು.

ಪೂಜೆಯಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಸುಮಾರು 30 ಮಾಜಿ ಶಾಸಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.