
ಬಂಗಾರಪೇಟೆ: ಮಕರ ಸಂಕ್ರಾಂತಿ ಹಬ್ಬದಲ್ಲಿ ಗ್ರಾಮೀಣ ಭಾಗಗಳಲ್ಲಿ ಸಂಪ್ರದಾಯವಾಗಿ ನಡೆಯುವ ಎತ್ತುಗಳ ಓಟಕ್ಕೆ ಈ ಬಾರಿಯೂ ಪೊಲೀಸರು ಅಡ್ಡಿಪಡಿಸಿರುವುದು ಹಲವೆಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲ್ಲೂಕಿನ ಕಾಮಸಮುದ್ರ ಮತ್ತು ಬೂದಿಕೋಟೆ ಹೋಬಳಿಯ ಗಡಿಭಾಗದ ಹಳ್ಳಿಗಳಲ್ಲಿ ಮಕರ ಸಂಕ್ರಾಂತಿಯಂದು ನಡೆಯುವ ಎತ್ತುಗಳ ಓಟ ನೋಡುವುದೇ ಒಂದು ಅದ್ಭುತ ಅನುಭವ. ಬಣ್ಣ ಬಣ್ಣದ ಹೂವುಗಳು, ಬಲೂನು, ಕೊಂಬುಗಳಿಗೆ ಗೆಜ್ಜೆ ಕಟ್ಟಿ ಅಲಂಕರಿಸಿರುವುದನ್ನು ನೋಡುವುದೇ ಚೆಂದ. ಇಂತಹ ಆಟಕ್ಕೆ ಅಡ್ಡಿಪಡಿಸಿರುವುದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ವರ್ಷವಿಡೀ ಸಾಕಿದ ಎತ್ತುಗಳ ಶಕ್ತಿ ಪ್ರದರ್ಶನ ಹಾಗೂ ಮನರಂಜನೆಗಾಗಿ ಇರುವ ಎತ್ತುಗಳ ಓಟ ಕ್ರೀಡೆಯನ್ನು ಅಡ್ಡಿಪಡಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಪ್ರಾಣಿಗಳಿಗೆ ಹಿಂಸೆಯಾಗುವಂತಹ ಕ್ರೀಡೆಗಳಿಗೆ ಕಟ್ಟುನಿಟ್ಟಿನ ನಿಯಮಗಳಿವೆ. ಇದನ್ನು ಪಾಲಿಸುವುದು ಪೊಲೀಸರ ಜವಾಬ್ದಾರಿ. ಹಾಗಾಗಿ ರಾಸುಗಳ ಓಟಕ್ಕೆ ಅನುಮತಿ ನೀಡುತ್ತಿಲ್ಲ.
-ಶಿವಾಂಶು ರಜಪೂತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆಜಿಎಫ್
ರಾಸುಗಳ ಓಟ ನಮಗೆ ಕೇವಲ ಹಬ್ಬವಲ್ಲ ಇದು ನಮ್ಮ ಬದುಕಿನ ಭಾಗ. ಎತ್ತುಗಳನ್ನು ನಾವು ಮಕ್ಕಳಂತೆ ಸಾಕಿರುತ್ತೇವೆ ಅವುಗಳಿಗೆ ಹಿಂಸೆ ನೀಡುವುದು ನಮ್ಮ ಉದ್ದೇಶವಲ್ಲ.
-ಬಸವರಾಜ ಎಸ್ ಸಾರಾಕಸನಹಳ್ಳಿ ರೈತ
ನಮ್ಮ ಪೂರ್ವಜರಿಂದ ನಡೆದುಕೊಂಡು ಬಂದ ಈ ಆಚರಣೆಯು ಕೇವಲ ಕ್ರೀಡೆಯಲ್ಲ ಇದು ರೈತ ಸಂಸ್ಕೃತಿಯ ಭಾವನೆ. ಇದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ.
-ಮುರಳಿ ಟಿ.ಎನ್. ತಳೂರು ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.