
ಪ್ರಜಾವಾಣಿ ವಾರ್ತೆ
ಬೇತಮಂಗಲ: ಗ್ರಾಮದ ಭವಾನಿ ನ್ಯೂ ಇಂಟರ್ ನ್ಯಾಷನಲ್ ಶಾಲಾ ವಾರ್ಷಿಕೋತ್ಸವವನ್ನು ಪೌರ ಕಾರ್ಮಿಕರಿಗೆ ಸನ್ಮಾನಿಸುವ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.
ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಜೊತೆಗೆ ಪೋಷಕರಿಗೆ ಕ್ರೀಡಾಕೂಟ ಆಯೋಜಿಸಿತ್ತು, ವಿಜೇತ ಪೋಷಕರಿಗೆ ಬಹುಮಾನ ವಿತರಿಸಲಾಯಿತು.
ಕಮಲಮ್ಮ ಗೋಪಾಲ್ ರೆಡ್ಡಿ, ಸ್ವಾತಿ ರಮೇಶ್, ನಿವೃತ್ತ ಶಿಕ್ಷಕ ಅಶ್ವತ್ಥಪ್ಪ, ಶ್ರೀ ಹರಿ, ವಿನು ಕಾರ್ತಿಕ್, ಗಂಗಮ್ಮ ಕೊಂಡಪ್ಪ, ಭಾಸ್ಕರ್, ಮಂಜುನಾಥ್, ಸತ್ಯ ನಾರಾಯಣ ಮೂರ್ತಿ ಸೇರಿದಂತೆ ಸಹ ಶಿಕ್ಷಕರು, ಸಿಬ್ಬಂದಿ ವರ್ಗ, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.