ADVERTISEMENT

ಶ್ರೀನಿವಾಸಪುರ: ಕೋಲಾರಮ್ಮ ಸ್ವಚ್ಛತಾ ವಾಹನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 7:47 IST
Last Updated 1 ಡಿಸೆಂಬರ್ 2025, 7:47 IST
ಶ್ರೀನಿವಾಸಪುರದಲ್ಲಿ ಕೋಲಾರಮ್ಮ ಸ್ವಚ್ಛತಾ ವಾಹನಕ್ಕೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಚಾಲನೆ ನೀಡಿದರು
ಶ್ರೀನಿವಾಸಪುರದಲ್ಲಿ ಕೋಲಾರಮ್ಮ ಸ್ವಚ್ಛತಾ ವಾಹನಕ್ಕೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಚಾಲನೆ ನೀಡಿದರು   

ಶ್ರೀನಿವಾಸಪುರ: ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಡಾವಣೆಗಳಲ್ಲಿ ಸ್ವಚ್ಛತೆ‌ಗಾಗಿ ಕೋಲಾರಮ್ಮ ಸ್ವಚ್ಛತಾ ವಾಹನ ಬಳಕೆ ಮಾಡುತ್ತಿದ್ದು, ಆರೋಗ್ಯ ದೃಷ್ಟಿಯಿಂದ ಸಾರ್ವಜನಿಕರು ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.

ಪುರಸಭೆ ಮುಂಭಾಗದಲ್ಲಿ ಕೋಲಾರಮ್ಮ ಸ್ವಚ್ಛತಾ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಟ್ಟಣದಲ್ಲಿನ ಬೇಕರಿ, ಅಂಗಡಿ, ಹೋಟೆಲ್‍ಗಳು, ವ್ಯಾಪಾರ ಮಳಿಗೆಗೆಗಳ ಮಾಲೀಕರು ಪ್ಲಾಸ್ಟಿಕ್‍ ಬಳಕೆ ಮಾಡದೆ ಸ್ವಚ್ಛತೆ ಕಾಪಾಡಬೇಕು ಎಂದು ಮನವಿ ಮಾಡಿದರು.

ADVERTISEMENT

ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಮಾತನಾಡಿ, ಜಿಲ್ಲಾಧಿಕಾರಿ ಆದೇಶದಂತೆ ಈ ಸ್ವಚ್ಛತಾ ವಾಹನವನ್ನು ಪಟ್ಟಣದಲ್ಲಿ ಬಳಕೆ ಮಾಡುತ್ತಿದ್ದು, ಎಲ್ಲಾ ನಾಗರಿಕರು ಸಹಕರಿಸಬೇಕು ಎಂದರು.

ಪುರಸಭೆ ಆರೋಗ್ಯ ಅಧಿಕಾರಿ ಟಿ.ವಿ.ಸುರೇಶ್, ತಾ.ಪಂ ಮಾಜಿ ಸದಸ್ಯ ಮಂಜುನಾಥರೆಡ್ಡಿ, ಜೆ.ತಿಮ್ಮಚಂದ್ರ ಗ್ರಾ.ಪಂ.ಅಧ್ಯಕ್ಷ ಶಂಕರರೆಡ್ಡಿ, ಉಪಾಧ್ಯಕ್ಷ ನಾಗೇಶ್‍ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.