ADVERTISEMENT

ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಅಭಿವೃದ್ಧಿ ಶೂನ್ಯ: ಮಾಜಿ ಶಾಸಕ ವೈ.ಸಂಪಂಗಿ ಆರೋಪ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 6:16 IST
Last Updated 9 ಡಿಸೆಂಬರ್ 2025, 6:16 IST
ಬೇತಮಂಗಲದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ಜಯರಾಮ್ ಅವರಿಗೆ ಮನವಿ ಸಲ್ಲಿಸಿದರು
ಬೇತಮಂಗಲದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ಜಯರಾಮ್ ಅವರಿಗೆ ಮನವಿ ಸಲ್ಲಿಸಿದರು   

ಬೇತಮಂಗಲ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಮುಖ್ಯಮಂತ್ರಿ ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ ಆರೋಪಿಸಿದರು.

ಬೇತಮಂಗಲದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.

‘ರಾಜ್ಯದಲ್ಲಿ ಸುಳ್ಳಿನಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು, ಅಭಿವೃದ್ಧಿ ಮಾಡದೆ ಎರಡೂವರೆ ವರ್ಷ ಪೂರ್ಣಗೊಳಿಸಿದೆ. ಈಗ ಪ್ರತಿನಿತ್ಯ ಕುರ್ಚಿ ಕಿತ್ತಾಟದಲ್ಲಿ ತೊಡಗಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ’ ಎಂದರು.

ADVERTISEMENT

‘ಬಿಜೆಪಿ ಆಡಳಿತಾವಧಿಯಲ್ಲಿ ಕೊಳವೆಬಾವಿಗೆ ವಿದ್ಯುತ್ ಅಳವಡಿಸಿಕೊಳ್ಳಲು ₹10 ರಿಂದ ₹15 ಸಾವಿರದಲ್ಲಿ ಮುಗಿಯುತ್ತಿತ್ತು. ಆದರೆ ಈಗ ₹2 ರಿಂದ ₹3 ಲಕ್ಷ ಬರಿಸಬೇಕಿದೆ’ ಎಂದರು.

‘ರಾಜ್ಯದಲ್ಲಿ ಯಾವಾಗ ಬೇಕಾದರೂ ಕಾಂಗ್ರೆಸ್ ಸರ್ಕಾರವು ಬೀಳಬಹುದು. ಯಾವ ಸಮಯದಲ್ಲಾದರೂ ಚುನಾವಣೆ ನಡೆಯಬಹುದು. ಹಾಗಾಗಿ ಮೈತ್ರಿ ಪಕ್ಷ ಕಾರ್ಯಕರ್ತರು ಚುನಾವಣೆ ಎದುರಿಸಲು ಸಜ್ಜಾಗಿ’ ಎಂದರು.

ಬೇತಮಂಗಲದ ಉಪ ತಹಶೀಲ್ದಾರ್ ಜಯರಾಮ್ ಅವರು ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿ, ಕಂದಾಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

ಲಕ್ಷ್ಮಿ ನಾರಾಯಣ್ ಶರ್ಮ, ಸುರೇಶ್, ಲಕ್ಷ್ಮಣ್ ಗೌಡ, ವಿಜಯ್ ಭಾಸ್ಕರ್ ನಾಯ್ಡು, ಸುನೀಲ್ ಕುಮಾರ್, ಮಮತಾ ಗಣೇಶ್, ಅಪ್ಪೋಜಿ, ಪುರುಷೋತ್ತಮ್, ಕೃಷ್ಣ ಮೂರ್ತಿ, ನರಸಿಂಹ, ಬಾಲಕೃಷ್ಣಪ್ಪ, ಸುಧಾಕರ್ ರೆಡ್ಡಿ, ಧನುಷ್, ಮಂಜುನಾಥ್, ಅನಿಲ್, ನಾರಾಯಣ ಸ್ವಾಮಿ, ಕಾರಿ ವೆಂಕಟಾಚಲಪತಿ, ಚಂಗೇಗೌಡ, ಲಕ್ಷ್ಮಿ ನಾರಾಯಣ, ನಂದೀಶ್, ಓಂ ಸುರೇಶ್, ಶ್ರೀನಿವಾಸ್, ವೆಂಕಟೇಶ್, ಉಮೇಶ್, ಶ್ರೀರಾಮಪ್ಪ, ಕೊಂಡಪ್ಪ, ರವಿ, ದೇವರಾಜ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.