ADVERTISEMENT

ಮಾಲೂರು: ಸಂಕ್ರಾಂತಿ ಹಬ್ಬಕ್ಕೆ ಕೋವಿಡ್‌ ಭೀತಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 7:47 IST
Last Updated 15 ಜನವರಿ 2022, 7:47 IST
ಮಾಲೂರು ಪಟ್ಟಣದ ಮಹಾರಾಜ ವೃತ್ತದಲ್ಲಿ ಶುಕ್ರವಾರ ಮಕರ ಸಂಕ್ರಾಂತಿ ಹಬ್ಬದ ಆಚರಣೆಗೆ ನಾಗರಿಕರು ಸಾಮಗ್ರಿ ಖರೀದಿಸುವಲ್ಲಿ ನಿರತರಾಗಿರುವುದು
ಮಾಲೂರು ಪಟ್ಟಣದ ಮಹಾರಾಜ ವೃತ್ತದಲ್ಲಿ ಶುಕ್ರವಾರ ಮಕರ ಸಂಕ್ರಾಂತಿ ಹಬ್ಬದ ಆಚರಣೆಗೆ ನಾಗರಿಕರು ಸಾಮಗ್ರಿ ಖರೀದಿಸುವಲ್ಲಿ ನಿರತರಾಗಿರುವುದು   

ಮಾಲೂರು: ಕೊರೊನಾ ಸೋಂಕು ಏರಿಕೆಯ ಭೀತಿ ನಡುವೆಯೇ ಸಂಕ್ರಾಂತಿ ಹಬ್ಬದ ಆಚರಣೆಗೆ ಪಟ್ಟಣದಲ್ಲಿ ಸಿದ್ಧತೆ ನಡೆದಿದೆ.

ಎಳ್ಳು-ಬೆಲ್ಲ ಬೀರಲು ಯುವತಿಯರು, ಮಹಿಳೆಯರು ಹಾಗೂ ಮಕ್ಕಳು ಸಾಮಗ್ರಿ ಹಾಗೂ ಹೊಸ ಉಡುಪುಗಳ ಖರೀದಿಯಲ್ಲಿ ನಿರತರಾಗಿದ್ದರು. ಗ್ರಾಮಾಂತರ ಪ್ರದೇಶದಲ್ಲಿ ದನಗಳಿಗೆ ಕಿಚ್ಚು ಹಾಯಿಸಲು ಸಿದ್ಧತೆ ನಡೆದಿದೆ.

ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಇದು ಸುಗ್ಗಿ ಸಂಭ್ರಮದ ಸಂಕೇತ. ಸೂರ್ಯನು ಕರ್ಕರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವೇ ಮಕರ ಸಂಕ್ರಾಂತಿ.

ADVERTISEMENT

ಪಟ್ಟಣದ ಮಹಾರಾಜ ವೃತ್ತ, ಮಾರಿಕಾಂಬ ವೃತ್ತ, ಬಸ್‌ನಿಲ್ದಾಣದ ರಸ್ತೆಬದಿಯಲ್ಲಿ ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಕಡಲೆಕಾಯಿ ಬೀಜ, ಉರಿಗಡಲೆ ಮಾರಾಟ ಬಲು ಜೋರಾಗಿತ್ತು. ಬೆಲೆ ಹೆಚ್ಚಾಗಿದ್ದರೂ ಜನರು ಮಾತ್ರ ಅಂಗಡಿಗಳಿಗೆ ಮುಗಿಬಿದ್ದು ಖರೀದಿಸುತ್ತಿರುವುದು ಕಂಡು ಬಂದಿತು.

ಇನ್ನು ದನ, ಕರುಗಳಿಗೆ ಅಲಂಕಾರ ಮಾಡುವ ಕೊಂಬಿನ ಬಣ್ಣ, ಬಣ್ಣದ ಪೇಪರ್‌ಗಳು, ಕೊರಳಿನ ಹಾಗೂ ಕಾಲಿನ ಗೆಜ್ಜೆ, ಬಟ್ಟೆ ಮಾರಾಟ
ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.