ADVERTISEMENT

ಚುನಾವಣೆಯಲ್ಲಿ ಲೋಪ ಎಸಗಿದರೆ ಕ್ರಮ

ಎಆರ್‌ಒ, ಎಪಿಆರ್‌ಒ ತರಬೇತಿಯಲ್ಲಿ ಡಿಸಿ ಜೆ.ಮಂಜುನಾಥ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 11:43 IST
Last Updated 24 ಮಾರ್ಚ್ 2019, 11:43 IST
ಕೋಲಾರದಲ್ಲಿ ಭಾನುವಾರ ಪಿಆರ್‍ಒ ಹಾಗೂ ಎಪಿಆರ್‍ಒಗಳಿಗೆ ಭಾನುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿದರು.
ಕೋಲಾರದಲ್ಲಿ ಭಾನುವಾರ ಪಿಆರ್‍ಒ ಹಾಗೂ ಎಪಿಆರ್‍ಒಗಳಿಗೆ ಭಾನುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿದರು.   

ಕೋಲಾರ: ಚುನಾವಣೆಗೆ ನಿಯೋಜನೆಯಾಗಿರುವ ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಮತದಾನ ದಿನದಂದು ಯಾವುದೇ ಲೋಪ ಎಸಗಿದರೂ ಕಂಡು ಬಂದರೂ ತೊಂದರೆ ಅನುಭವಸಬೇಕಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಮತಟ್ಟೆ ಅಧಿಕಾರಿ (ಪಿಆರ್‍ಒ) ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ (ಎಪಿಆರ್‍ಒ) ಭಾನುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಏ.18ರಂದು ಅಂದುಕೊಂಡ ರೀತಿಯಲ್ಲೇ ಚುನಾವಣೆ ಪ್ರಕ್ರಿಯೆ, ಮತದಾನ ನಡೆಯಬೇಕಾದರೆ ಪಿಆರ್‍ಒ, ಎಪಿಆರ್‍ಒಗಳ ಪಾತ್ರ ಬಹುಮುಖ್ಯವಾಗಿದ್ದು, ಸೂಕ್ತ ರೀತಿಯಲ್ಲಿ ತರಬೇತಿ ಪಡೆದುಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಪಿಆರ್‍ಒ ಮತ್ತು ಎಪಿಆರ್‍ಗಳು ಕರ್ತವ್ಯ ನಿರ್ವಹಿಸಿದ್ದರೂ ಪ್ರತಿ ಚುನಾವಣೆಯೂ ಹೊಸತೇ, ಅದರದ್ದೇ ಆದ ಸವಾಲು ಹೊಂದಿರುತ್ತದೆ. ಒಂದೊಂದು ಚುನಾವಣೆ ಭಿನ್ನವಾಗಿರುತ್ತದೆ. ಹೀಗಾಗಿ ಜವಾಬ್ದಾರಿಯಿಂತ ಕರ್ತವ್ಯ ನಿರ್ವಹಿಸಬೇಕೆಂದು. ಚುನಾವಣೆ ಸಂಬಂಧ ಏನಾದರೂ ಗೊಂದಲ ಇದ್ದಲ್ಲಿ ತರಬೇತಿಯಲ್ಲಿ ನಿವಾರಣೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ADVERTISEMENT

ಮತಗಟ್ಟೆ ಅಧಿಕಾರಿಗಳು ಬೂತ್ ಏಜೆಂಟ್‍ಗಳ ಸಮ್ಮುಖದಲ್ಲಿ ಮಾರ್ಕ್‍ಪೋಲ್ ಮಾಡಿ ಸಿದ್ದಪಡಿಸಿಟ್ಟುಕೊಂಡು ಬೆಳಗ್ಗೆ 7 ಗಂಟೆಗೆ ಸರಿಯಾಗಿ ಮತದಾನ ಪ್ರಕ್ರೀಯೆ ಆರಂಭಿಸಬೇಕು. ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಕಾರ್ಯನಿರ್ವಹಿಸಬೇಕೆಂದರಲ್ಲದೆ ಚುನಾವಣೆ ಕರ್ತವ್ಯದ ಸಂಭಾವನೆ ಪಡೆಯಲು ಸಿಬ್ಬಂದಿಗಳು ತಮ್ಮ ಬ್ಯಾಂಕ್ ಖಾತೆ ಇನ್ನಿತರೆ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದರು.

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 4,000 ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಮಹಿಳೆಯರಿಗೆ ಆಯಾ ತಾಲೂಕಿನಲ್ಲಿ ಹಾಗೂ ಪುರುಷರಿಗೆ ಇತರೆ ತಾಲೂಕುಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕರ್ತವ್ಯ ನಿರ್ವಹಿಸುವ ಮತಗಟ್ಟೆ ಮಹಿಳಾ ಅಧಿಕಾರಿಗಳು ಕ್ಷೇತ್ರ ವ್ಯಾಪ್ತಿಯ ಮತದಾರರಾಗಿದ್ದಲ್ಲಿ ಆಯಾ ತಾಲೂಕಿನಲ್ಲೇ ಮತದಾನಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.

ಇಡೀ ಜಿಲ್ಲೆಯಾದ್ಯಂತ ಲೋಕಸಭೆ ಕ್ಷೇತ್ರ ಒಂದೇ ಆಗಿರುವುದರಿಂದ ಅಂಚೆ ಮತಪತ್ರ ಇರುವುದಿಲ್ಲ. ಮತಗಟ್ಟೆಗಳಿಗೆ ನೇಮಕಗೊಳ್ಳುವ ಮಹಿಳಾ ಅಧಿಕಾರಿಗಳು ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಅಂತಹವರು ಇಡಿಸಿ ನಮೂನೆಯನ್ನು ಭರ್ತಿ ಮಾಡಿ ನೀಡಿದರೆ ಕರ್ತವ್ಯ ನಿರ್ವಹಿಸುವ ಮತಗಟ್ಟೆಯಲ್ಲೇ ಹಕ್ಕು ಚಲಾಯಿಸಲು ಅವಕಾಶ ನೀಡಲಾಗುವುದು. ಪುರುಷರಿಗೆ ಇತರೆ ತಾಲ್ಲೂಕುಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಅವರಿಗೂ ಆ ಮತಗಟ್ಟೆಯಲ್ಲೇ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಗುವುದು' ಎಂದರು.

ಮಾಲೂರು, ಬಂಗಾರಪೇಟೆ, ಮುಳಬಾಗಿಲು, ಕೆಜಿಎಫ್, ಶ್ರೀನಿವಾಸಪುರದಲ್ಲಿಯೂ ಇದೇ ನಡೆ ನಡೆಸಲಾಗುತ್ತಿದೆ. ಮೊದಲನೇ ಹಂತದಲ್ಲಿ ಮಾಹಿತಿಗಳನ್ನು ನೀಡಲಾಗುವುದು, ಎರಡನೇ ಹಂತದಲ್ಲಿ ಮತಯಂತ್ರ ಜೋಡಣೆ, ಬಳಕೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಈಗಾಗಲೇ ರೂಪಿಸಲಾಗಿರುವ ಯೋಜನೆಯಂತೆಯೇ ಪ್ರತಿಯೊಂದು ಕೆಲಸವನ್ನು ಸಮರ್ಪಕವಾಗಿ ಮಾಡಿಕೊಳ್ಳಬೇಕು. ಮತದಾನಕ್ಕೆ ಅಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದ್ದು, ತಾವು ಬೆಳಿಗ್ಗೆ ಮತದಾನ ಆರಂಭಕ್ಕೂ ಮುನ್ನ ಅಣುಕು ಮತದಾನವನ್ನು ಅಭ್ಯರ್ಥಿಗಳ ಪರ ಏಜೆಂಟರ ಸಮ್ಮುಖದಲ್ಲಿ ಕಡ್ಡಾಯವಾಗಿ ಮಾಡಬೇಕು ಎಂದು ತಿಳಿಸಿದರು.

ಇದೇ ವೇಳೆ ಚುನಾವಣಾಧಿಕಾರಿ ಜೆ.ಮಂಜುನಾಥ್ ಚುನಾವಣೆ ಸಂಬಂಧ ಸ್ಥಾಪಿಸಿರುವ ಭದ್ರತಾಕೊಠಡಿಯನ್ನು ವೀಕ್ಷಿಸಿ ಬಂದೋಬಸ್ತ್ ಕುರಿತು ಮಾಹಿತಿ ಪಡೆದುಕೊಂಡರು. ಸಿಸಿಟಿವಿ, ಪೊಲೀಸ್ ಬಂದೋಬಸ್ತ್ ಸೇರಿದಂತೆ ಎಲ್ಲ ವ್ಯವಸ್ಥೆಗಳ ಕುರಿತು ಸಿಬ್ಬಂದಿ ಮಾಹಿತಿ ಒದಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.