ADVERTISEMENT

ಬೀದಿನಾಯಿಗಳಿಗೆ ಬಲಿಯಾದ ಜಿಂಕೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 14:10 IST
Last Updated 3 ಮಾರ್ಚ್ 2025, 14:10 IST
ಕೆಜಿಎಫ್‌ ಬೆಮಲ್‌ ಬಳಿ ಬೀದಿ ನಾಯಿಗಳಿಗೆ ಬಲಿಯಾದ ಜಿಂಕೆ
ಕೆಜಿಎಫ್‌ ಬೆಮಲ್‌ ಬಳಿ ಬೀದಿ ನಾಯಿಗಳಿಗೆ ಬಲಿಯಾದ ಜಿಂಕೆ   

ಕೆಜಿಎಫ್‌: ಬೆಮಲ್‌ ಕಾರ್ಖಾನೆಯ ಆವರಣದಲ್ಲಿರುವ ವಾಹನ ನಿಲ್ದಾಣದ ಬಳಿ ಸೋಮವಾರ ಸಂಜೆ ಬೀದಿ ನಾಯಿಗಳ ದಾಳಿಗೆ ಸಿಲುಕಿ ಜಿಂಕೆ ಮರಿಯೊಂದು ಮೃತಪಟ್ಟಿದೆ.

ಮೇವಿಗಾಗಿ ಕಾಡಿನಿಂದ ಬೆಮಲ್‌ ಕಾರ್ಖಾನೆಯ ಹಿಂಭಾಗಕ್ಕೆ ಬಂದಿದ್ದ ಸುಮಾರು ಒಂದು ವರ್ಷ ಪ್ರಾಯದ ಗಂಡು ಜಿಂಕೆಯನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗಿ ಸಾಯಿಸಿವೆ. ನೆರೆಹೊರೆಯವರು ಬೀದಿ ನಾಯಿಗಳನ್ನು ಓಡಿಸಿದರೂ ಪ್ರಯೋಜನವಾಗದೆ ಜಿಂಕೆ ಮರಿ ಅಸು ನೀಗಿದೆ ಎಂದು ವಾಯ್ಸ್‌ ಫಾರ್‌ ವೈಲ್ಡ್‌ ಲೈಫ್‌ ಮುಖ್ಯಸ್ಥ ಸ್ನೇಕ್‌ ರಾಜ ತಿಳಿಸಿದ್ದಾರೆ. ಜಿಂಕೆ ಕಳೇಬರವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT