ADVERTISEMENT

ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 14:41 IST
Last Updated 11 ಫೆಬ್ರುವರಿ 2020, 14:41 IST
ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ
ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ   

ಕೋಲಾರ: ‘ನಿರಂತರ ಅಭ್ಯಾಸ, ತರಬೇತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತೀರ್ಣಗೊಳ್ಳಲು ಸಾಧ್ಯ’ ಎಂದು ಸ್ಪರ್ಧಾ ವಿಜೇತ ಪ್ರಧಾನ ಸಂಪಾದಕ ಕೆ.ಎಂ.ಸುರೇಶ್ ತಿಳಿಸಿದರು.

ನಗರದಲ್ಲಿ ಸ್ಪರ್ಧಾ ವಿಜೇತ ವತಿಯಿಂದ ಈಚೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಉಚಿತ ತರಬೇತಿಯಲ್ಲಿ ಮಾತನಾಡಿ, ‘ಬರ ಪೀಡಿತ ಜಿಲ್ಲೆಯ ವಿದ್ಯಾವಂತರು ಬದುಕು ರೂಪಿಸಿಕೊಳ್ಳಲು ಉದ್ಯೋಗಕ್ಕೆ ಸೇರಬೇಕು. ನಿಮ್ಮ ಗುರಿ ಸಾಧನೆಗೆ ತರಬೇತಿ ಅಗತ್ಯ’ ಎಂದರು.

‘ಇಂದು ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ಕಲಿಕೆಯ ಜತೆಗೆ ಜಾಗತಿಕ ವಿದ್ಯಮಾನಗಳ ಅರಿವು ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಸಮಾಜದಲ್ಲಿ ಜ್ಞಾನ ಗಳಿಸಿಕೊಂಡವರಿಗೆ ಮಾತ್ರ ಬೆಲೆಯಿದ್ದು, ಜ್ಞಾನ ಸಂಪಾದನೆಯ ಕಡೆಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಇಂದಿನ ಯುಗದಲ್ಲಿ ಬೆರಳ ತುದಿಯಲ್ಲಿಯೇ ಎಲ್ಲ ಮಾಹಿತಿ ಲಭ್ಯವಾಗಲಿದ್ದು ತಂತ್ರಜ್ಞಾನ ಬಳಕೆಯ ಜತೆಗೆ ಉತ್ತಮ ಮಾರ್ಗದರ್ಶಕರ ಸಹಕಾರದಿಂದ ಗುರಿ ಸಾಧಿಸಹುದು’ ಎಂದು ಹೇಳಿದರು.

‘ರಾಜಕಾರಣ ನನ್ನ ಬದುಕಲ್ಲ, ಆದರೆ ಅಧಿಕಾರ ಇದ್ದರೆ ಯುವಕರಿಗೆ ಸೇವೆ ಕಲ್ಪಿಸಬಹುದು ಎಂಬ ಉದ್ದೇಶದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದೆನೆ. ಪದವಿದರರು ಸಹಕಾರ ನೀಡಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.