ADVERTISEMENT

ಕೋಲಾರ| ಜಿಲ್ಲಾ ಮಟ್ಟದ ಕ್ರೀಡಾಕೂಟ: ಸಾಹಿತ್ಯ, ಭೂಮಿಕಾ ಉತ್ತಮ ಸಾಧನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 6:52 IST
Last Updated 10 ನವೆಂಬರ್ 2025, 6:52 IST
ಕೋಲಾರದಲ್ಲಿ ನಡೆದ ಶಾಲಾ ಕ್ರೀಡಾಕೂಟದ ಬಾಲಕಿಯರ ವಿಭಾಗದ 100 ಮೀಟರ್‌ ಓಟದಲ್ಲಿ ಸ್ಪರ್ಧಿಗಳು ಗುರಿಯತ್ತ ಮುನ್ನುಗ್ಗಿದ ಸಂದರ್ಭ
ಕೋಲಾರದಲ್ಲಿ ನಡೆದ ಶಾಲಾ ಕ್ರೀಡಾಕೂಟದ ಬಾಲಕಿಯರ ವಿಭಾಗದ 100 ಮೀಟರ್‌ ಓಟದಲ್ಲಿ ಸ್ಪರ್ಧಿಗಳು ಗುರಿಯತ್ತ ಮುನ್ನುಗ್ಗಿದ ಸಂದರ್ಭ   

ಕೋಲಾರ: ಮಾಲೂರು ತಾಲ್ಲೂಕಿನ ಭೂಮಿಕಾ ಹಾಗೂ ಸಾಹಿತ್ಯ 17 ವರ್ಷದೊಳಗಿನವರ ಪ್ರೌಢಶಾಲೆಗಳ ಬಾಲಕಿಯರ ಕ್ರೀಡಾಕೂಟದಲ್ಲಿ ಮಿಂಚು ಹರಿಸಿದ್ದಾರೆ.

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಈ ಸಾಧನೆ ಮಾಡಿದ್ದಾರೆ.

100 ಮೀ ಓಟದಲ್ಲಿ ಭೂಮಿಕಾ ವೇಗದ ಓಟಗಾರ್ತಿಯಾಗಿ ಹೊರಹೊಮ್ಮಿದರು. ಮಾಲೂರಿನ ಭರಣಿ ಎಂ ದ್ವಿತೀಯ ಹಾಗೂ ಕೋಲಾರ ಅರ್ಚಿತಾ ಮೂರನೇ ಸ್ಥಾನ ಪಡೆದರು.

ADVERTISEMENT

ಮಾಲೂರಿನ ತಾಲ್ಲೂಕಿನವರೇ ಆದ ಸಾಹಿತ್ಯ 800 ಮೀ., 1,500 ಮೀ. ಹಾಗೂ 3,000 ಮೀಟರ್‌ ಓಟದಲ್ಲಿ ಮೊದಲ ಸ್ಥಾನ ಪಡೆದು ವಿಕ್ರಮ ಮೆರೆದಿದ್ದಾರೆ.

17 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಆದಿತ್ಯರೆಡ್ಡಿ ವೇಗದ ಓಟಗಾರನಾಗಿ ಹೊರಹೊಮ್ಮಿದ್ದಾರೆ. ಮಾಲೂರಿನ ರಾಜಕುಮಾರ್‌ 200 ಮೀ. ಹಾಗೂ 400 ಮೀ. ಓಟದಲ್ಲಿ ಮಿಂಚಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಜಿಲ್ಲಾ ಮಟ್ಟದ 14 ಮತ್ತು 17 ವರ್ಷದೊಳಗಿನವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ, ಬಾಲಕಿಯರ ಕ್ರೀಡಾಕೂಟಕ್ಕೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ (ಆಡಳಿತ) ಅಲ್ಮಾಸ್‌ ಪರ್ವೀನ್‌ ತಾಜ್‌ ಚಾಲನೆ ನೀಡಿದ್ದರು.

ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಅಜಯ್ ಕುಮಾರ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಕೆ.ಆರ್.ಚಂದ್ರಶೇಖರ್, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ವಿ.ಮುರಳಿ ಮೋಹನ್‌, ಎಂ.ನಾಗರಾಜು, ಪದಾಧಿಕಾರಿಗಳು, ಶಿಕ್ಷಕರು ಹಾಗೂ ಆರೂ ತಾಲ್ಲೂಕುಗಳ‌ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.

ಫಲಿತಾಂಶ:

17 ವರ್ಷದೊಳಗಿನವರ ಬಾಲಕರು: 100 ಮೀ.: ಆದಿತ್ಯರೆಡ್ಡಿ (ಸೇಂಟ್‌ ಥೆರೆಸಾ)–1, ರಾಜಕುಮಾರ್‌ (ವಿವೇಕಾನಂದ–ಮಾಲೂರು)–2, ಸಂಜಯ್‌ ಕುಮಾರ್‌ (ಅರಾಭಿಕೊತ್ತನೂರು–ಕೋಲಾರ)–3; 200 ಮೀ.: ರಾಜಕುಮಾರ್‌ (ಮಾಲೂರು)–1, ರೋಷನ್‌ ಆರ್‌. (ಕೋಲಾರ)–2, ಶ್ಯಾಮ್‌ ಕುಮಾರ್‌ (ಮಾಲೂರು)–3; 400 ಮೀ.: ರಾಜಕುಮಾರ್‌ (ಮಾಲೂರು)–1, ಶಕ್ತಿವೇಲ್‌ (ಕೆಜಿಎಫ್‌)–2, ಧನುಷ್‌ (ಕೋಲಾರ)–3; 800 ಮೀ.: ಶಾಮ್‌ಕುಮಾರ್‌ (ಮಾಲೂರು)–1, ವಿಜೇಂದ್ರ (ಶ್ರೀನಿವಾಸಪುರ)–2, ವಿದ್ಯಾಸಾಗರ್‌ (ಕೋಲಾರ)–3; 1,500 ಮೀ.: ಯಶವಂತ್ (ಮಾಲೂರು)–1, ವಿದ್ಯಾಸಾಗರ್‌ (ಕೋಲಾರ)–2, ಲೋಚನ್‌ (ಶ್ರೀನಿವಾಸಪುರ)–3; 3,00 ಮೀ.: ವಿದ್ಯಾಸಾಗರ್‌ (ಕೋಲಾರ)–1, ಯಶ್ವಂತ್‌ (ಮಾಲೂರು)–2, ಧನಂಜಯ್‌ (ಮಾಲೂರು)–3; ಲಾಂಗ್‌ ಜಂಪ್‌: ನಂದನ್‌ ಆರ್‌. (ಕೋಲಾರ)–1, ಕುಶಾಲ್‌ ಕುಮಾರ್‌ (ಆರಿಕುಂಟೆ)–2, ಚರಣ್‌ (ಸಬರಮತಿ–ಕೋಲಾರ)–3; ಹೈಜಂಪ್‌: ಸಂದೇಶ್‌ (ಕೋಲಾರ)–1, ನಿರಂಜನ್‌ (ಬಂಗಾರಪೇಟೆ)–2, ಗೋಕುಲ್‌ (ಸೇಂಟ್‌ ಮೆರೀಸ್‌)–3.

14 ವರ್ಷದೊಳಗಿನವರ ಬಾಲಕರು: ತೇಜಸ್‌ (ಕೆಜಿಎಫ್‌)–1, ಹರಿಕುಮಾರ್‌ (ಕೋಲಾರ)–2, ಸೈಯದ್‌ ಪಾಷ (ಕೋಲಾರ)–3; 200 ಮೀ.: ಹರಿಕುಮಾರ್‌ (ಕೋಲಾರ)–1, ರಾಜಕುಮಾರ್‌ (ಕೆಜಿಎಫ್‌)–2, ವಿದ್ಯಾಚರಣ್‌ (ಮಾಲೂರು)–3; 400 ಮೀ.: ವಿದ್ಯಾಚರಣ್ (ಮಾಲೂರು)–1, ಗಗನ್‌ ಕುಮಾರ್‌ (ಕೆಜಿಎಫ್‌)–2, ಮಹೇಶ್‌ (ಮುಳಬಾಗಿಲು)–3; 600 ಮೀ.:ಗಗನ್‌ ಕುಮಾರ್‌(ಕೆಜಿಎಫ್‌)–1, ಧನುಷ್‌ (ಕೋಲಾರ)–2, ಚರಣ್‌ (ಮುಳಬಾಗಿಲು)–3; 80 ಮೀ. ಹರ್ಡಲ್ಸ್‌: ರಂಜಿತ್‌ (ಶ್ರೀನಿವಾಸಪುರ)–1, ಹರಿಕುಮಾರ್‌ (ಕೋಲಾರ)–2, ಹೃತಿಕ್‌ (ಬಂಗಾರಪೇಟೆ)–3; ಲಾಂಗ್ ಜಂಪ್‌: ವೆಂಕಟಾದ್ರಿ (ಕೋಲಾರ)–1, ಹೇಮಂತ್‌ಕುಮಾರ್‌ (ಶ್ರೀನಿವಾಸಪುರ)–2, ಚಂದು (ಬಂಗಾರಪೇಟೆ)–3; ಹೈಜಂಪ್‌: ಚಂದು (ಬಂಗಾರಪೇಟೆ)–1, ಹೇಮಂತ್‌ಕುಮಾರ್‌ (ಶ್ರೀನಿವಾಸಪುರ)–2, ಹರ್ಷ (ಕೆಜಿಎಫ್‌)–3.

17 ವರ್ಷದೊಳಗಿನವರ ಬಾಲಕಿಯರು: 100 ಮೀ.: ಭೂಮಿಕಾ (ಮಾಲೂರು)–1, ಭರಣಿ ಎಂ (ಮಾಲೂರು)–2, ಅರ್ಚಿತಾ (ಬೆಗ್ಲಿಹೊಸಹಳ್ಳಿ–ಕೋಲಾರ)–3; 200 ಮೀ.: ಭೂಮಿಕಾ (ಮಾಲೂರು)–1, ಹಾರಿಕಾ (ಮಾಲೂರು)–2, ವಾಣಿ (ಕೋಲಾರ)–3; 400 ಮೀ.: ಭೂಮಿಕಾ (ಮಾಲೂರು)–1, ಹಾರಿಕಾ (ಮಾಲೂರು)–2, ಗೌರಿ (ಕೆಜಿಎಫ್‌)–3; 800 ಮೀ.: ಎಂ.ಸಾಹಿತ್ಯ (ಮಾಲೂರು)–1, ಚಿನ್ಮಯಿ ಖುಷಿ (ಮಾಲೂರು)–2, ದಕ್ಷಿತಾ ಜಿ. (ಬಂಗಾರಪೇಟೆ)–3; 1,500 ಮೀ.: ಎಂ.ಸಾಹಿತ್ಯ (ಮಾಲೂರು)–1, ಅಂಜಲಿ (ಕೋಲಾರ)–2, ಮೌನಿಕಾ (ಚಲ್ದಿಗಾನಹಳ್ಳಿ–ಶ್ರೀನಿವಾಸಪುರ)–3; 3,000 ಮೀ.: ಎಂ.ಸಾಹಿತ್ಯ (ಮಾಲೂರು)–1, ತೇಜಾ (ಬಂಗಾರಪೇಟೆ)–2, ಚಿನ್ಮಯಿ ಖುಷಿ (ಮಾಲೂರು)–3; 100 ಮೀ. ಹರ್ಡಲ್ಸ್‌: ಮಾನಸಾ (ಕೋಲಾರ)–1, ಮೇಘನಾ (ಶ್ರೀನಿವಾಸಪುರ)–2, ವಿಹಾಸಿನಿ (ಮಾಲೂರು)–3; ಲಾಂಗ್‌ ಜಂಪ್‌: ಶ್ವೇತಾ (ಬಂಗಾರಪೇಟೆ)–1, ಜ್ಯೋತಿಕಾ (ಕೆಜಿಎಫ್‌)–2, ಭುವನಾ (ಕೋಲಾರ)–3; ಹೈಜಂಪ್‌: ಸ್ಮಿತಾ (ರಾಜೇನಹಳ್ಳಿ)–1, ನಂದಿನಿ (ಚಿನ್ಮಯ)–2, ಲಲಿತಾ (ಕೆಆರ್‌ಸಿಎಸ್‌–ಬಂಗಾರಪೇಟೆ)–3;

ಹೈಜಂಪ್‌ನಲ್ಲಿ ಬಾಲಕಿಯು ಯಶಸ್ವಿಯಾಗಿ ಜಿಗಿದ ರೀತಿ
ಕ್ರೀಡಾಕೂಟದ ಬಾಲಕರ ವಿಭಾಗದ 800 ಮೀಟರ್‌ ಓಟದಲ್ಲಿ ಗುರಿಯತ್ತ ಮುನ್ನುಗಿದ ಸ್ಪರ್ಧಿಗಳು
ಕ್ರೀಡಾಕೂಟದ ಬಾಲಕಿಯರ ವಿಭಾಗದ 800 ಮೀಟರ್‌ ಓಟದಲ್ಲಿ ಮೊದಲ ಎರಡು ಸ್ಥಾನ ಪಡೆದ ಸ್ಪರ್ಧಿಗಳು ಓಡಿದ ರೀತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.