ADVERTISEMENT

ನಾಯಿ ದಾಳಿ: ಜಿಂಕೆ ಬಲಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 5:55 IST
Last Updated 27 ಸೆಪ್ಟೆಂಬರ್ 2021, 5:55 IST
ಕೆಜಿಎಫ್‌ ಬೆಮಲ್‌ ನಗರದಲ್ಲಿ ಭಾನುವಾರ ನಾಯಿ ದಾಳಿಗೆ ಸಿಕ್ಕಿ ಜಿಂಕೆ ಮರಿ ಸಾವನ್ನಪ್ಪಿತು
ಕೆಜಿಎಫ್‌ ಬೆಮಲ್‌ ನಗರದಲ್ಲಿ ಭಾನುವಾರ ನಾಯಿ ದಾಳಿಗೆ ಸಿಕ್ಕಿ ಜಿಂಕೆ ಮರಿ ಸಾವನ್ನಪ್ಪಿತು   

ಕೆಜಿಎಫ್‌: ಬೆಮಲ್‌ ನಗರದ ಎಚ್‌ ಆ್ಯಂಡ್‌ ಪಿ ವಿಭಾಗದ ಹಿಂಭಾಗದಲ್ಲಿ ಭಾನುವಾರ ಬೀದಿ ನಾಯಿಗಳ ದಾಳಿಗೆ ಸಿಕ್ಕಿ ಜಿಂಕೆ ಮರಿ ಮೃತಪಟ್ಟಿದೆ.

ದಾರಿ ತಪ್ಪಿ ನಗರ ಪ್ರದೇಶದ ಅಂಚಿಗೆ ಬಂದಿದ್ದ ಜಿಂಕೆ ಮರಿಯ ಮೇಲೆ ನಾಯಿಗಳು ದಾಳಿ ಮಾಡುತ್ತಿದ್ದುದನ್ನು ಕಂಡು, ಸ್ಥಳೀಯರು ರಕ್ಷಿಸಲು ಹೋದರು. ಆದರೆ ಅಷ್ಟರೊಳಗೆ ನಾಯಿ ದಾಳಿಗೆ ಸಿಕ್ಕಿ ಗಾಯಗೊಂಡಿದ್ದ ಹೆಣ್ಣು ಜಿಂಕೆ ಮರಿ ಸಾವನ್ನಪ್ಪಿತು. ವಾಯ್ಸ್ ಫಾರ್ ವೈಡ್‌ ಲೈಫ್‌ ಮುಖ್ಯಸ್ಥ ಸ್ನೇಕ್‌ರಾಜ ಜಿಂಕೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ
ಒಪ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT