
ಶ್ರೀನಿವಾಸಪುರ: ಪಟ್ಟಣದ ಕಟ್ಟೆಕೆಳಗಿನಪಾಳ್ಯ, ಅಂಬೇಡ್ಕರ್ ಪಾಳ್ಯ, ಇಂದಿರಾನಗರ, ಶಿವಪುರ, ಕೆ.ಕಾಲೊನಿ, ಬಂಬೂ ಬಜಾರ್ ಸೇರಿದಂತೆ ವಿವಿಧೆಡೆ ಮಾದಕವಸ್ತು ಸೇವನೆ ದುಷ್ಪರಿಣಾಮಗಳ ಬಗ್ಗೆ ಸೋಮವಾರ ಅರಿವು, ಜನಜಾಗೃತಿ ಸಭೆ ನಡೆಸಲಾಯಿತು.
ಮಾದಕ ವಸ್ತುವಿನ ಮಾರಾಟ ಜಾಲದ ಮೂಲಕ ವಿದ್ಯಾರ್ಥಿಗಳಿಗೆ, ಯುವಕರಿಗೆ ಪ್ರಾಥಮಿಕ ಹಂತದಲ್ಲಿ ಉಚಿತವಾಗಿ ಅವುಗಳನ್ನು ಒದಗಿಸಿ, ಬಳಿಕ ವ್ಯಸನಕ್ಕೆ ಅಧೀನರಾಗುವಂತೆ ಮಾಡಲಾಗುತ್ತದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತೆ ಸೈಯದ್ ಹಜಮತ್ ಆಫ್ರಿನ್ ಎಚ್ಚರಿಕೆ ನೀಡಿದರು.
ಗುಟ್ಕಾ, ಧೂಮಪಾನ, ಮದ್ಯಪಾನ, ಗಾಂಜಾ ಮತ್ತು ಮೆಡಿಕಲ್‌ಗಳಲ್ಲಿ ಅನಧಿಕೃತವಾಗಿ ಸಿಗುವಂತಹ ಮಾದಕ ದ್ರವ್ಯಗಳ ಕುರಿತು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಡ್ರಗ್ಸ್ ಮಾಫಿಯಾ ಮಾರಾಟಗಾರರು ಅಂತರ್ಜಾಲದ ಮೂಲಕ ಮಾರಾಟ ಮಾಡುತ್ತಿದ್ದಾರೆ. ಪಾರ್ಸಲ್‌ಗಳ ಮೂಲಕ ಕಳಿಸುವ ಹಂತಕ್ಕೆ ಬೆಳೆದಿದ್ದಾರೆ ಎಂದರು.
ಜಿಲ್ಲಾ ಅಬಕಾರಿ ಉಪಧೀಕ್ಷಕ ಶ್ರೀನಿವಾಸಮೂರ್ತಿ, ಅಬಕಾರಿ ನಿರೀಕ್ಷರಾದ ಪುಷ್ಪಾ, ರಮಾಮಣಿ, ಶಶಿಕಲಾ, ಮುನಿರತ್ನಮ್ಮ, ರವೀಂದ್ರ ಆರ್., ಉಪನಿರೀಕ್ಷಕರು ವೇಣುಗೋಪಾಲ್, ಬಾಲಕೃಷ್ಣ, ಗಿರೀಶ್ ಬಾಬು, ನಾಗರಾಜ್, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.