
ಬಂಗಾರಪೇಟೆ: ತಾಲ್ಲೂಕಿನ ಕನಮನಹಳ್ಳಿ ಗ್ರಾಮದ ಕಾಡಿನಲ್ಲಿ ಗುರುವಾರ ಮಧ್ಯಾಹ್ನ ಕಾಡಾನೆ ಗುಂಪು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ತಾಲ್ಲೂಕಿನ ಕನಮನಹಳ್ಳಿ ಗ್ರಾಮದ ರೈತರು ಜಾನುವಾರು ಮೇಯಿಸಲು ಕಾಡಿನತ್ತ ಹೋದ ಸಂದರ್ಭದಲ್ಲಿ ಆನೆಗಳ ಗುಂಪು ಪ್ರತ್ಯಕ್ಷವಾಗಿದೆ. ಆನೆಗಳನ್ನು ಕಂಡ ರೈತರು ತಕ್ಷಣವೇ ಜಾನುವಾರುಗಳೊಂದಿಗೆ ಗ್ರಾಮದತ್ತ ಓಡಿ ಬಂದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಪರಿಸ್ಥಿತಿಯನ್ನು ಅವಲೋಕಿಸಿ, ಆನೆಗಳನ್ನು ಕಾಡಿನೊಳಗೆ ಓಡಿಸಲು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರು ಒಂಟಿಯಾಗಿ ಕಾಡಿನಂಚಿನ ಪ್ರದೇಶಗಳಿಗೆ ಹೋಗಬೇಡಿ. ಜಾನುವಾರುಗಳನ್ನು ಮೇಯಿಸಲು ಕಾಡಿಗೆ ಹೋಗಬೇಡಿ. ರಾತ್ರಿ ಸಂಚಾರ ಬೇಡ. ಸಂಜೆ 6 ಗಂಟೆಯ ನಂತರ ಅರಣ್ಯದ ಹಾದಿಗಳಲ್ಲಿ ಸಂಚರಿಸಬೇಡಿ. ಆನೆಗಳು ಕಂಡುಬಂದಲ್ಲಿ ಅವುಗಳನ್ನು ಕೆಣಕದೆ ಅಥವಾ ತಾವೇ ಓಡಿಸಲು ಪ್ರಯತ್ನಿಸದೆ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕೆಂದು ಉಪ ವಲಯ ಅರಣ್ಯಾಧಿಕಾರಿ ನಾಗೇಶ್ ತಿಳಿಸಿದರು.
Quote - ಯಾರೂ ಕೂಡ ಆನೆಗಳ ಹತ್ತಿರ ಹೋಗವುದು ಫೋಟೋ ಅಥವಾ ವಿಡಿಯೊ ತೆಗೆಯುವ ಪ್ರಯತ್ನ ಮಾಡಬೇಡಿ. ಇದು ಅಪಾಯಕ್ಕೆ ದಾರಿ ಮಾಡಿಕೊಡಬಹುದು. ಆನೆಗಳು ಕಾಣಿಸಿಕೊಂಡರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿ. ನಾಗೇಶ್ ಉಪ ವಲಯ ಅರಣ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.